Satish Jarakiholi : ಸಿಎಂ ಆಗಲು ಶನಿಕಾಟ ಇರಬಾರದು ಎಂದ ಸತೀಶ್ ಜಾರಕಿಹೊಳಿ – ಇಲ್ಲಿ ಶನಿ ಯಾರು, ಕಾಟ ಯಾರ್ದು?

Satish Jarakiholi: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದ ಕೂಗು ಜೋರಾಗಿಯೇ ಕೇಳಿಬರುತ್ತಿದೆ. ಅಲ್ಲದೆ ಸಿಎಂ ಸ್ಥಾನಕ್ಕೆ ಹಲವು ಆಕಾಂಕ್ಷಿಗಳು ಕಾದು ಕೂತ್ತಿದ್ದಾರೆ. ಅದರಲ್ಲಿ ಸತೀಶ್ ಜಾರಕಿಹೊಳಿ ಕೂಡ ಒಬ್ಬರು. ಈ ಕುರಿತಾಗಿ ಮಾತನಾಡಿದ್ದ ಜಾರಕಿಹೊಳಿ ಅವರು ‘ನಾನು ಸಿಎಂ ಆಗೋಕೆ ಗುರು ಬಲ, ತಾರಾ ಬಲ ಬೇಕು, ಜೊತೆಗೆ ಶನಿಕಾಟ ಕಡಿಮೆ ಆಗ್ಬೇಕು’ ಎಂದು(Satish Jarkiholi) ಹೇಳಿದ್ದಾರೆ.

ಯಸ್, ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸಿ, ನಾನು ಸಿಎಂ ಆಗಲು ಗುರುಬಲ, ತಾರಾ ಬಲ ಕೂಡಬೇಕು. ಶನಿಕಾಟ ಕಡಿಮೆಯಾಗಬೇಕು. ಒಬ್ಬೊಬ್ಬರಿಗೆ ಒಂದೊಂದು ರೀತಿ ಸಮಸ್ಯೆ ಇವೆ. ನನಗೆ ಶನಿಕಾಟ ಇದೆ ಎಂದಿದ್ದಾರೆ.ಹಾಗಿದ್ರೆ ಇಲ್ಲಿ ಶನಿ ಯಾರು? ಕಾಟ ಯಾರದ್ದು?
ಯಾವುದೇ ವಿಚಾರವನ್ನು ಬಹಿರಂಗವಾಗಿ ಮಾತನಾಡಬಾರದು ಎನ್ನುವ ಆದೇಶವನ್ನು ಹೈಕಮಾಂಡ್ ನೀಡಿದ್ದರೂ, ಎಲ್ಲರೂ ಅವರವರ ಮೂಗಿಗೆ ನೇರವಾದ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಸಹಕಾರ ಸಚಿವ ಕೆಎನ್ ರಾಜಣ್ಣ ಬಹಿರಂಗವಾಗಿಯೇ ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಿರುದ್ದ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ಸರ್ಕಾರದ ಕೆಲಸ ಕಾರ್ಯಗಳಲ್ಲಿ ಅವರು ತಲೆಹಾಕುತ್ತಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ. ಕಾಂಗ್ರೆಸ್ ಶಾಸಕರು, ಸಚಿವರ ಜೊತೆ ಒನ್-ಟು-ಒನ್ ಮೀಟಿಂಗ್ ನಂತರ, ಸುರ್ಜೇವಾಲ ಅವರ ಮೂಗು ತೂರಿಸುವಿಕೆ ಹೆಚ್ಚಾಗಿದೆ ಎನ್ನುವುದು ಹಲವು ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ, ಶನಿಕಾಟ, ತಾರಾಬಲದ ಜಾರಕಿಹೊಳಿ ಕುತೂಹಲಕ್ಕೆ ಕಾರಣವಾಗಿದೆ.
ಅಲ್ಲದೆ ” ಮುಖ್ಯಮಂತ್ರಿ ಆಗಲಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿ ಎಲ್ಲದಕ್ಕೂ ಗುರುಬಲ ಕೂಡಿರಬೇಕು, ತಾರಾಬಲ ಜೊತೆಗಿರಬೇಕು. ಶುಕ್ರ ಮತ್ತು ಶನಿ ಆ ಕಡೆಯಿಂದ ಈ ಕಡೆಗೆ ಓಡಾಡಬೇಕು. ಎಲ್ಲವೂ ಒಂದಕ್ಕೊಂದು ಲಿಂಕ್ ಇದೆ. ಶನಿಕಾಟ ಇದ್ದರೂ ಇರಬಹುದು. ಆದರೆ, ಸರ್ಕಾರ ಚೆನ್ನಾಗಿ ನಡೆಯುತ್ತದೆ. ಅದರಲ್ಲಿ ಏನೂ ಬದಲಾವಣೆ ಆಗುವುದಿಲ್ಲ” ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಜಾರಕಿಹೊಳಿ ಯಾವ ಹುದ್ದೆಯನ್ನು ಮತ್ತು ಯಾರನ್ನು ಉದ್ದೇಶಿಸಿ ಈ ಮಾತನಾಡಿದರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
Comments are closed.