Elephant attack: ಕೊಡಗು ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ – ಕರಡಿಗೋಡುವಿನಲ್ಲಿ ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯ – ಇನ್ನೊಂದು ಪ್ರಕರಣದಲ್ಲಿ ಕಾರ್ಮಿಕರು ಪಾರು

Share the Article

Elephant attack: ಸಿದ್ದಾಪುರ ಸಮೀಪದ ಕರಡಿಗೋಡು ಕಾಫಿ ತೋಟ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕಾಡನೆ ದಾಳಿ ಮಾಡಿದ ಘಟನೆ ನಡೆದಿದೆ.

ಕಾಡಾನೆ ದಾಳಿಯಿಂದ ಗಾಯಗೊಂಡು ಪ್ರಾಣಪಾಯದಿಂದ ಇಬ್ಬರು ಕಾರ್ಮಿಕರು ಪಾರಾಗಿದ್ದಾರೆ.

ಕಾಡನೆ ಕರಡಿಗೋಡು ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳ ಭೇಟಿ ನೀಡಿದ್ದಾರೆ.

ಇನ್ನೊಂದೆಡೆ ಆನೆ ಅಟ್ಟಿಸಿಕೊಂಡು ಬಂದಿದ್ದು, ಕಾರ್ಮಿಕರು ಓಡಿ ಪಾರಾಗಿದ್ದಾರೆ. ಪಾಲಿಬೆಟ್ಟ ಸಮೀಪದ ವಡ್ಡರಹಳ್ಳಿ ಬಿ. ಬಿ.ಟಿ ಸಿ ಕಂಪನಿ ಮಾಲಿಕತ್ವದ ಕಾಫಿ ತೋಟದಲ್ಲಿ ಇಂದು ಬೆಳಗ್ಗೆ ಕೆಲಸಕ್ಕೆ ಎಂದು ಕಾರ್ಮಿಕರು ತೆರಳುವ ವೇಳೆ ಕಾಡಾನೆ ಒಂದು ಕಾರ್ಮಿಕರನ್ನು ಅಟ್ಟಿಸಿಕೊಂಡು ಬಂದ ಘಟನೆ ನಡೆದಿದೆ. ಕಾರ್ಮಿಕರು ಓಡಿ ಪಾರಾಗಿರುವ ಘಟನೆ ಸಿಸಿಟಿವಿಯಲ್ಲಿ ಸರಿಯಾಗಿದೆ.

ಇದೀಗ ಕಾರ್ಮಿಕರು ಅರಣ್ಯ ಇಲಾಖೆ ವಿರುದ್ದ ತಿರುಗಿ ಬಿದಿದ್ದು ತೀವ್ರ ಪ್ರತಿಭಟನೆ ನಡೆಸಲು ಕಾರ್ಮಿಕ ಸಂಘಟನೆಗಳು ಸಜ್ಜಾಗಿವೆ.

Comments are closed.