Harihara Veera Mallu: ಮುಖಕ್ಕೆ ಕೆಂಪು ಪರದೆ ಹಾಕೊಂಡು ‘ಹರಿ ಹರ ವೀರ ಮಲ್ಲು’ ಸಿನಿಮಾ ನೋಡಿದ ಮಹಿಳೆಯರು- ಕಾರಣವೇನು?

Hari Hara Veera Mallu: ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರಮಲ್ಲು’ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಆದರೂ ಸಿನಿಮಾ ಮೊದಲ ದಿನ ಒಳ್ಳೆಯ ಗಳಿಕೆಯನ್ನು ಮಾಡಿದೆ. ಆಶ್ಚರ್ಯ ಏನಂದ್ರೆ ಕೆಲವು ಮಹಿಳೆಯರು ಮುಖಕ್ಕೆ ಪರದೆ ಹಾಕಿಕೊಂಡು ಬಂದು ಮೊದಲ ದಿನ ‘ಹರಿ ಹರ ವೀರ ಮಲ್ಲು’ ಸಿನಿಮಾ ವೀಕ್ಷಿಸಿದ್ದಾರೆ.

ಹೌದು, ಕೆಂಪು ಬಣ್ಣದ ಪರದೆಗಳನ್ನು ಮುಖಕ್ಕೆ ಹಾಕಿಕೊಂಡು ಒಟ್ಟಿಗೆ ಚಿತ್ರಮಂದಿರಕ್ಕೆ ಬಂದು, ಇಡೀ ಸಿನಿಮಾ ಅನ್ನು ಪರದೆ ಧರಿಸಿಯೇ ಸಿನಿಮಾ ನೋಡಿದ್ದಾರೆ ಮಹಿಳೆಯರು. ಹೀಗೆ ಮಹಿಳೆಯರು ಪರದೆ ಹಾಕಿಕೊಂಡು ಸಿನಿಮಾ ನೋಡಿರುವ ಚಿತ್ರ, ವಿಡಿಯೋ ವೈರಲ್ ಆಗಿದ್ದು, ಮಹಿಳೆಯರು ಹೀಗೇಕೆ ಮಾಡಿದ್ದಾರೆ ಎಂಬ ಚರ್ಚೆ ಪ್ರಾರಂಭವಾಗಿದೆ.
ಅಂದಹಾಗೆ ಮಹಿಳೆಯರು ಪ್ರತಿಭಟನೆಯ ಕಾರಣಕ್ಕೆ ಹೀಗೆ ಮಾಡಿದ್ದಾರೆ ಎಂದು ಕೆಲವರು ಊಹಿಸಿದ್ದಾರೆ. ಆದರೆ ಹಾಗೇನೂ ಇಲ್ಲ. ಸಿನಿಮಾ ಒಂದರ ಪ್ರಚಾರಕ್ಕಾಗಿ ಚಿತ್ರತಂಡವೇ ಹೀಗೆ ಪರದೆ ಹಾಕಿಕೊಂಡು ಬಂದು ‘ಹರಿ ಹರ ವೀರ ಮಲ್ಲು’ ಸಿನಿಮಾ ನೋಡಿದ್ದಾರೆ. ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ‘ಪರದ’ ಹೆಸರಿನ ತೆಲುಗು ಸಿನಿಮಾನಲ್ಲಿ ನಟಿಸಿದ್ದು, ಆ ಸಿನಿಮಾದ ಪ್ರಚಾರಕ್ಕಾಗಿ ಈಗ ಕೆಲ ಮಹಿಳೆಯರು ಪರದೆ ಧರಿಸಿ ‘ಹರಿ ಹರ ವೀರ ಮಲ್ಲು’ ಸಿನಿಮಾ ವೀಕ್ಷಿಸಿದ್ದಾರೆ.
#Paradha ladies watch #HariHaraVeeraMallu at Prasad’s! #Paradha movie directed by Praveen Kandregula (Cinema Bandi & Subham fame) is releasing on 22 August! pic.twitter.com/sO7AgByzMt
— idlebrain jeevi (@idlebrainjeevi) July 24, 2025
Comments are closed.