Revanth Reddy: ‘ಕಾರ್ಯಕ್ರಮಕ್ಕೆ ಬರಲ್ಲ’ ಎಂದು ಸೋನಿಯಾ ಗಾಂಧಿ ಪತ್ರ – ‘ಇದು ನನ್ನ ಆಸ್ಕಾರ್ ಅವಾರ್ಡ್’ ಎಂದ ತೆಲಂಗಾಣ ಸಿಎಂ

Revanth Reddy: ರಾಜಕೀಯ ಪಕ್ಷಗಳಲ್ಲಿ ಹೈಕಮಾಂಡ್ ಎಂಬುದು ಅತ್ಯುತ್ತಮ ಸ್ಥಾನ. ಯಾವುದೇ ಅತ್ಯುತ್ತಮ ಹುದ್ದೆಯಲ್ಲಿರುವ ರಾಜಕೀಯ ನಾಯಕ ಹೈಕಮಾಂಡನ್ನು ದೇವರೆಂದು ಪೂಜಿಸುತ್ತಾನೆ. ತಲೆಬಾಗಿ ನಿಂತು ಗೌರವಿಸುತ್ತಾರೆ. ಅವರು ಸಿಎಂ,ಪಿಎಂ ಅಥವಾ ಪ್ರೆಸಿಡೆಂಟ್ ಕೂಡ ಆಗಿರಬಹುದು. ಇದೀಗ ಅಂತದ್ದೇ ಒಂದು ಘಟನೆ ನಡೆದಿದ್ದು ಸೋನಿಯಾ ಗಾಂಧಿ ಕಾರ್ಯಕ್ರಮಕ್ಕೆ ಬರಲಾಗದು ಎಂದು ಬರೆದ ಪತ್ರವನ್ನು ಹಿಡಿದು ತೆಲಂಗಾಣ ಮುಖ್ಯಮಂತ್ರಿ ‘ಇದು ನನ್ನ ಆಸ್ಕರ್ ಅವಾರ್ಡ್ ಎಂದು’ ಬಹಿರಂಗವಾಗಿ ಹೇಳಿದ್ದಾರೆ.

ಹೌದು, ಗುರುವಾರ ನವದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಕಾಂಗ್ರೆಸ್ ಸಂಸದೀಯ ಪಕ್ಷದ ಪ್ರಸ್ತುತ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು “ಈ ಮಹತ್ವದ ಮತ್ತು ಶುಭ ಸಂದರ್ಭದಲ್ಲಿ ಭಾಗವಹಿಸಲು ನನಗೆ ಸಂತೋಷವಾಗುತ್ತಿತ್ತು, ಆದರೆ ಹಿಂದಿನ ಕಾರ್ಯಯೋಜನೆಗಳಿಂದಾಗಿ ನಾನು ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸುತ್ತೇನೆ. ಆದರೂ, ಯಶಸ್ವಿ ಮತ್ತು ಸ್ಮರಣೀಯ ಕಾರ್ಯಕ್ರಮಕ್ಕಾಗಿ ನಿಮಗೆ ಮತ್ತು ಭಾಗವಹಿಸುವ ಎಲ್ಲರಿಗೂ ನನ್ನ ಹೃತ್ಪೂರ್ವಕ ತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ” ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ಬರೆದಿದ್ದರು.
ಸೋನಿಯಾ ಬರೆದ ಈ ಪತ್ರವನ್ನು ಹಂಚಿಕೊಂಡ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು “ಸೋನಿಯಾ ಗಾಂಧಿ ಮೇಡಂ, ನಮ್ಮ ನಾಯಕಿ, ತ್ಯಾಗದ ಪ್ರತಿಮೆ, ಪ್ರತ್ಯೇಕ ತೆಲಂಗಾಣದ ಕನಸನ್ನು ಸಾಧ್ಯವಾಗಿಸಿದ ಧೀಮಂತ ನಾಯಕಿ. ಅವರ ಮೆಚ್ಚುಗೆಯ ಪತ್ರವು ಸಾಧನೆಯ ಪರಾಕಾಷ್ಠೆ ಮತ್ತು ತೃಪ್ತಿಯ ಶಿಖರವಾಗಿದೆ” ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ಅಲ್ಲದೆ ಭಾವನಾತ್ಮಕ ಭಾಷಣದಲ್ಲಿ, ತೆಲಂಗಾಣ ಸಿಎಂ ಸಮೀಕ್ಷೆಯನ್ನು ಹೊಗಳಿ ಸೋನಿಯಾ ಗಾಂಧಿಯವರ ಕೈಬರಹದ ಪತ್ರವನ್ನು ತೋರಿಸಿದರು ಮತ್ತು ಅದನ್ನು “ನೊಬೆಲ್ ಪ್ರಶಸ್ತಿ ಅಥವಾ ಆಸ್ಕರ್‌ಗಿಂತ ಹೆಚ್ಚು ಮೌಲ್ಯಯುತ” ಮತ್ತು “ವೈಯಕ್ತಿಕ ಜೀವಮಾನದ ಸಾಧನೆ” ಎಂದು ಬಣ್ಣಿಸಿದರು.
If anyone has an issue calling it as Telangana Model of Caste Census, we can call it RaRe model – CM Revanth Reddy
A letter of a appreciation from Sonia Gandhi is Oscar Award , Nobel Prize & Lifetime achievement for me pic.twitter.com/WtFcJPnjcd
— Naveena (@TheNaveena) July 24, 2025
Comments are closed.