Renukaswamy Murder Case: ಡಿ ಗ್ಯಾಂಗ್ ಜಾಮೀನು ಭವಿಷ್ಯ ಇಂದು?

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸೇರಿ ಏಳು ಮಂದಿಯ ಜಾಮೀನು ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಇಂದು ನಡೆಯಲಿದ್ದು, ಆರೋಪಿಗಳ ಪರ ವಾದ ಮಂಡನೆಯಾಗಲಿದೆ. ನಂತರ ಆದೇಶ ಪ್ರಕಟ ಮಾಡುವ ಸಾಧ್ಯತೆ ಇದೆ.

ನಟ ದರ್ಶನ್ ಪರ ವಕೀಲ ಸಿದ್ಧಾರ್ಥ್ ದವೆ ವಾದ ಮಾಡಲಿದ್ದಾರೆ ಮಂಗಳವಾರ ಈ ಅರ್ಜಿ ವಿಚಾರಣೆ ನಡೆಯಬೇಕಿತ್ತು. ಆದರೆ ಅಂದು ಕೋರ್ಟ್ ಮುಂದೆ ಹಾಜರಾಗಿದ್ದ ವಕೀಲ ಸಿದ್ದಾರ್ಥ ದವೆ, ಪ್ರಕರಣದ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲ. ಕಳೆದ ರಾತ್ರಿ ಈ ಪ್ರಕರಣ ನನಗೆ ಬಂದಿದೆ. ಈ ಕುರಿತು ಅಧ್ಯಯನ ಮಾಡಬೇಕಿದೆ, ಸ್ವಲ್ಪ ಸಮಯ ಬೇಕು ಎಂದು ಮನವಿ ಮಾಡಿದ್ದು, ದ್ವಿ ಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸುವುದಾಗಿ ಹೇಳಿತ್ತು.
Comments are closed.