Kasaragod: ಕಾಸರಗೋಡು ಭೂಕುಸಿತ: ರಾಷ್ಟ್ರೀಯ ಹೆದ್ದಾರಿ ಬಂದ್‌, ವಾಹನ ಸಂಚಾರದಲ್ಲಿ ವ್ಯತ್ಯಯ

Share the Article

Kasaragod: ಜಿಲ್ಲೆಯ ಚೆರುವತ್ತೂರಿನ ವೀರಾಮಲ ಬೆಟ್ಟ ಕುಸಿತವಾಗಿದೆ. ಕೇರಳ, ಕನ್ಯಾಕುಮಾರಿ-ಪನ್ವೇಲ್‌ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್‌ ಆಗಿದೆ. ಸ್ಥಳೀಯಾಡಳಿತ ಬದಲಿ ರಸ್ತೆ ಮಾರ್ಗವನ್ನು ಸೂಚಿಸಿದೆ.

ಮಣ್ಣು ತೆರವು ಕೆಲಸ ನಡೆಯುತ್ತಿದೆ. ಈ ಭಾಗದಲ್ಲಿ ಹಲವು ಸಮಯದಿಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಕಾಸರಗೋಡು ಎಸ್‌.ಪಿ ವಿಜಯ್‌ ಭರತ್‌ ರೆಡ್ಡಿ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ ಸಂಚಾರ ಸಾಮಾನ್ಯ ಸ್ಥಿತಿಗೆ ಬರುವ ನಿರೀಕ್ಷೆಯಿದೆ ಎನ್ನಲಾಗಿದೆ.

 

Comments are closed.