Vice President : ದಕ್ಷಿಣ ಕನ್ನಡದ ಈ ನಾಯಕನಿಗೆ ಉಪರಾಷ್ಟ್ರಪತಿ ಪಟ್ಟ?

Share the Article

 

Vice President : ಜಗದೀಪ್ ಧಂಖರ್ ಅವರು ತಮ್ಮ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಇದೀಗ ಕೆಲವೇ ದಿನಗಳಲ್ಲಿ ಈ ಸ್ಥಾನಕ್ಕೆ ಮರು ಚುನಾವಣೆ ನಡೆಯಲಿದೆ ಇಂದು ಮೂಲಗಳು ತಿಳಿಸಿವೆ. ಇದರ ನಡುವೆ ಉಪರಾಷ್ಟ್ರಪತಿ ಸ್ಥಾನಕ್ಕೆ ಅನೇಕರು ರೇಸ್ ನಲ್ಲಿ ಇದ್ದಾರೆ ಎಂಬ ವಿಚಾರವೂ ಕೂಡ ಕೇಳಿಬರುತ್ತಿದೆ. ಆದರೆ ಕರ್ನಾಟಕದ, ದಕ್ಷಿಣ ಕನ್ನಡದ ಈ ನಾಯಕನಿಗೆ ಉಪರಾಷ್ಟ್ರಪತಿ ಪಟ್ಟ ದೊರೆಯಬಹುದು ಎಂದು ಮೂಲಗಳು ತಿಳಿಸಿವೆ.

ಹೌದು, ರಾಷ್ಟ್ರದಾದ್ಯಂತ ಮುಂದಿನ ಉಪರಾಷ್ಟ್ರಪತಿ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಹಲವರ ಹೆಸರು ಈ ರೇಸ್‌ನಲ್ಲಿದ್ದು, ಒಬ್ಬ ಕನ್ನಡಿಗರು ಕೂಡ ಇದ್ದಾರೆ. ಹಲವರು ಕನ್ನಡಿಗನಿಗೆ ಉಪ ರಾಷ್ಟ್ರಪತಿ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅವರೇ ಕರ್ನಾಟಕ ಮೂಲದವರಾದ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್.

ಯಸ್, ನಝೀರ್ ಅವರು 2025ರ ಉಪರಾಷ್ಟ್ರಪತಿ ಸ್ಥಾನಕ್ಕೆ ಪ್ರಮುಖ ಅಭ್ಯರ್ಥಿಯಾಗಿ ಎಂದು ಹೇಳಲಾಗುತ್ತಿದೆ. ಅಬ್ದುಲ್ ನಝೀರ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಭಾಗದವರು. ಇಲ್ಲಿಂದಲೇ ತಮ್ಮ ವಿದ್ಯಾಭ್ಯಾಸ ಮತ್ತು ವಕೀಲ ಹುದ್ದೆಯಲ್ಲಿ ಶುರು ಮಾಡಿದ್ದ ಅವರು ನಂತರ ಅವರು ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ 2017ರ ತ್ರಿವಳಿ ತಲಾಖ್ ಪ್ರಕರಣ ಮತ್ತು ಅಯೋಧ್ಯೆ ಭೂ ವಿವಾದ ಸಂಬಂಧಿ ನಿರ್ಣಯಗಳಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.

 ತಮ್ಮ ನಿವೃತ್ತಿಯ ಬಳಿಕ ಅವರು 2023ರಿಂದ ಆಂಧ್ರಪ್ರದೇಶ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಉಪರಾಷ್ಟ್ರಪತಿ ಸ್ಥಾನಕ್ಕೆ ಅವರ ಹೆಸರು ಕೇಳಿಬರುತ್ತಿದೆ.

Comments are closed.