KGF Babu: ಕೆಜಿಎಫ್ ಬಾಬು ಮನೆಗೆ ಆರ್ಟಿಓ ಅಧಿಕಾರಿಗಳ ದಾಳಿ – ಬಚ್ಚನ್, ಆಮೀರ್ ಖಾನ್ ನಿಂದ ಐಷಾರಾಮಿ ಕಾರು ಖರೀದಿ – ಟ್ಯಾಕ್ಸ್ ಕಟ್ಟದ ಬಗ್ಗೆ ಪರಿಶೀಲನೆ

Share the Article

KGF Babu: ಬೆಳ್ಳಂ ಬೆಳಗ್ಗೆ ಕೆಜಿಎಫ್ ಬಾಬುಗೆ ಆರ್ಟಿಓ ಅಧಿಕಾರಿಗಳು ಆತನ ಮನೆಗೆ ದಾಳಿ ಮಾಡಿ ಶಾಕ್ ಕೊಟ್ಟಿದ್ದಾರೆ. ಈತ ಐಷಾರಾಮಿ ಕಾರುಗಳ ಟ್ಯಾಕ್ಸ್ ಕಟ್ಟಿಲ್ಲ ಅಂತಾ ಆರ್ಟಿಓ ಅಧಿಕಾರಿಗಳು ಕಾರು ಸೀಜ್ ಮಾಡಲು ಮುಂದಾಗಿದ್ದಾರೆ. ರೋಲ್ಸ್ ರಾಯ್ಸ್, ವೆಲ್ಫೇರ್ ಸೇರಿ ಹಲವು ಐಷಾರಾಮಿ ಕಾರು ಹೊಂದಿರುವ ಕೆಜಿಎಫ್ ಬಾಬು ಮನೆಗೆ ಆರ್ಟಿಓ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ.

ಕೆಜಿಎಫ್ ಬಾಬು ಕಾರುಗಳ ಲಿಸ್ಟ್ ಸಮೇತ ಅಧಿಕಾರಿಗಳು ಆತನ ಮನೆಗೆ ಬಂದಿದ್ದು, ಆರ್ಟಿಓ ಜಂಟಿ ಆಯುಕ್ತರಾದ ಶೋಭಾ ಅವರ ನೇತೃತ್ವದ ತಂಡದಿಂದ ದಾಳಿ ಮಾಡಲಾಗಿದೆ. ಬೇರೆ ರಾಜ್ಯಗಳ ರಿಜಿಸ್ಟ್ರೇಷನ್ ಇರುವ ಐಶಾರಾಮಿ ಕಾರುಗಳು ಹೋಂದಿರುವ ಈತ ಟ್ಯಾಕ್ಸ್ ಕಟ್ಟಿರುವ ಬಗ್ಗೆ ಪರಿಶೀಲನೆಗೆ ಮೂಮದಾದ ಅಧಿಕಾರಿಗಳು. ಆದರೆ ಕೆಜಿಎಫ್ ಬಾಬು ಆರ್ಟಿಓ ಅಧಿಕಾರಿಗಳು ಮನೆಯ ಬಂದಾಗ ಗೇಟ್ ತೆಗೆಯದೇ ಅಧಿಕಾರಿಗಳನ್ನು ಕಾಯಿಸಿದ್ದ. ತದನಂತರ ಆರ್ ಟಿ ಓ ಅಧಿಕಾರಿಗಳು ಹೈ ಗ್ರೌಂಡ್ ಹೊಯ್ಸಳ ಪೊಲೀಸರನ್ನು ಕರೆಸಿ, ಅವರು ಗೇಟ್ ಓಪನ್ ಮಾಡುವಂತೆ ಸೆಕ್ಯೂರಿಟಿ ಜೊತೆ ಮಾತುಕತೆ ನಡೆಸಿ, ಗೇಟ್ ತೆಗೆಸಿದ್ದಾರೆ.

MH 11 AX 1, ರೋಲ್ಸ್ ರಾಯ್ , MH 02 BB 2 ರೋಲ್ಸ್ ರಾಯ್ ಅನ್ನು ಮಗಳ ಮಗುವಿಗಾಗಿ ಅಂದ್ರೆ ಮೊಮ್ಮಗಳಿಗಾಗಿ ವೇಲ್ಪೇರ್ ಕಾರ್ ಖರೀದಿ ಮಾಡಿದ್ದ. ಅಮಿತಾಬಚ್ಚನ್ ಹಾಗೂ ಅಮೀರ್ ಖಾನ್ ನಿಂದ ಕಾರು ಖರೀದಿ ಮಾಡಿದ್ದ. ಅಮೀರ್ ಖಾನ್ ಒಂದು ವರ್ಷ ಬಳಸಿರೋ MH 02 BB 2 ರೋಲ್ಸ್ ಕಾರು ಅನ್ನು ಪರ್ಚೇಸ್ ಮಾಡಿದ್ದ. ಇನ್ನು MH 11 AX 1 ರೋಲ್ಸ್ ರಾಯ್ ಅಮಿತಾಬಚ್ಚನ್ ಬಳಿ ಖರೀದಿ ಮಾಡಿದ್ದ. ಈತ ಸೆಲೆಬ್ರೆಟಿಗಳು ಬಳಸೋ ಕಾರು ಬಗ್ಗೆ ಕ್ರೇಜ್ ಹೊಂದಿದ್ದ ಎಂದು ಹೇಳಲಾಗುತ್ತದೆ.

ಒಂದೊಂದು ಕಾರಿನ ಹಿಂದೆಯೂ ಒಂದೊಂದು ಕಥೆ ಇದೆಯಂತೆ. ಮನೆಯ ಪಾರ್ಕಿಂಗ್ ನಲ್ಲಿರುವ ಒಟ್ಟು ನಾಲ್ಕು ಐಶಾರಾಮಿ ಕಾರುಗಳಿವೆ. ಒಂದೊಂದು ಕಾರಿನ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡ್ತಿದ್ದು, ಕಾರಿನ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳು ಕೆಜಿಎಫ್ ಬಾಬುನಿಂದ ಕಲೆ ಹಾಕುತ್ತಿದ್ದಾರೆ. ಯಾವಾಗ ಯಾರಿಂದ ಪರ್ಚೇಸ್ ಮಾಡಿದ್ದು…? ಯಾವ ರಾಜ್ಯದ ಕಾರು..? ಟ್ಯಾಕ್ಸ್ ಗಳನ್ನ ಪೇ ಮಾಡಿದ್ದೀರಾ ಅನ್ನೋದ್ರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅಧಿಕಾರಿಗಳು ಕೇಳುವ ವಿವರಗಳು ಹಾಗೂ ದಾಖಲೆಗಳನ್ನ ಕೆಜಿಎಫ್ ಬಾಬು ನೀಡುತ್ತಿದ್ದು, ಕಾರುಗಳ ಇನ್ಸ್ ರೆನ್ಸ್ ಗಳನ್ನೂ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Belthangady: ಬೆಳ್ತಂಗಡಿ: ನಕ್ಸಲ್ ನಾಯಕ ರೂಪೇಶ್ 3 ದಿನ ಪೊಲೀಸ್‌ ಕಸ್ಟಡಿಗೆ!

Comments are closed.