Bantwala: ಹಿರಿಯ ರಂಗಭೂಮಿ ಕಲಾವಿದ, ಚಿತ್ರನಟ ಚಿ.ರಮೇಶ್ ಕಲ್ಲಡ್ಕ ಸಾವು

Bantwala: ಹಿರಿಯ ರಂಗಭೂಮಿ ಕಲಾವಿದ ಚಿತ್ರ ನಟ ಚಿ.ರಮೇಶ್ ಕಲ್ಲಡ್ಕ (68) ಅವರು ಇಂದು (ಜು.23) ಬುಧವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಮಂಗಳೂರಿನ ಹೆಸರಾಂತ ನಾಟಕ ತಂಡ ಕಲಾಸಂಗಮದಲ್ಲಿ ಕಳೆದ 20ವರ್ಷಗಳಿಂದ ಹತ್ತಾರು ನಾಟಕಗಳಲ್ಲಿ ಅಭಿನಯ ಮಾಡುತ್ತಿದ್ದರು. ಒರಿಯರ್ದೊರಿ ಅಸಲ್, ಮದಿಮೆ, ಕುಟುಂಬ, ಶಿವಾಜಿ ಮೊದಲಾದ ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ. ಶಿವಧೂತೆ ಗುಳಿಗೆ ನಾಟಕದಲ್ಲಿ ಭೀಮಾರಾವ್ ಪಾತ್ರ ಮಾಡಿದ್ದರು.
Comments are closed.