Telangana : ಬಿಗ್ ಬಾಸ್ ವಿನ್ನರ್ ಗೆ 1 ಕೋಟಿ ಬಹುಮಾನ ಘೋಷಿಸಿದ ಮುಖ್ಯಮಂತ್ರಿ !!


Telangana: ದೇಶಾದ್ಯಂತ ಸಾಕಷ್ಟು ಸದ್ದು ಮಾಡುತ್ತಿರುವ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಬಿಗ್ ಬಾಸ್ ಶೋ ನಲ್ಲಿ ಗೆದ್ದವರಿಗೆ ದೊಡ್ಡ ಮಟ್ಟದ ಬಹುಮಾನ ಸಿಗುತ್ತದೆ. ಇದೀಗ ಬಿಗ್ ಬಾಸ್ ವಿನ್ನರ್ ಗೆ ಒಂದು ಕೋಟಿ ಬಹುಮಾನ ಕೊಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಘೋಷಣೆ ಮಾಡಿದ್ದಾರೆ.
ಹೌದು, ತೆಲಂಗಾಣದ ಯುವಕ ರಾಹುಲ್ ಸಿಪ್ಲಿಗಂಜ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರು ಬಿಗ್ ಬಾಸ್ ವಿನ್ನರ್ ಕೂಡ ಹೌದು. ಇವರಿಗೆ ಇದೀಗ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಘೋಷಣೆ ಮಾಡಿದ್ದಾರೆ. ಹಾಗಂತ ಇದು ಬಿಗ್ ಬಾಸ್ ಗೆದ್ದ ಕಾರಣಕ್ಕೆ ಕೊಟ್ಟ ಬಹುಮಾನವಲ್ಲ. ಈ ಬಹುಮಾನ ಘೋಷಣೆಗೂ ಒಂದು ಕಾರಣವಿದೆ.
ಅಂದಹಾಗೆ ತೆಲಂಗಾಣದ ಯುವಕ ರಾಹುಲ್ ಸಿಪ್ಲಿಗಂಜ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಖತ್ ಆಗಿ ಹಾಡುಗಳನ್ನು ಹಾಡುವ ಮೂಲಕ ಗಾಯಕರಾಗಿ ಬಹಳ ಜನಪ್ರಿಯರಾಗಿದ್ದಾರೆ. ಇದೀಗ ಗಾಯಕ ರಾಹುಲ್ ಸಿಪ್ಲಿಗಂಜ್‌ಗೆ ನೀಡಿದ್ದ ಭರವಸೆಯನ್ನು ಮುಖ್ಯಮಂತ್ರಿ ರೇವಂತ್ ರೆಡ್ಡಿ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ರಾಹುಲ್ ಸಿಪ್ಲಿಗಂಜ್‌ರನ್ನು ಪ್ರತ್ಯೇಕವಾಗಿ ಉಲ್ಲೇಖಿಸಿ, ಶೀಘ್ರದಲ್ಲೇ ಸರ್ಕಾರದಿಂದ ಘೋಷಣೆ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಅದರಂತೆ ಇಂದು ಪಾತಬಸ್ತಿ ಬೋನಾಲ ಹಬ್ಬದ ಸಂದರ್ಭದಲ್ಲಿ ರಾಹುಲ್‌ಗೆ ಬಹುಮಾನ ಘೋಷಿಸಿದ್ದಾರೆ
ಇನ್ನು ಪಾತಬಸ್ತಿಯ ಹುಡುಗನಾಗಿ ಆರಂಭವಾದ ರಾಹುಲ್‌ನ ಪ್ರಯಾಣ RRR ಸಿನಿಮಾದ ʼನಾಟು ನಾಟುʼ ಹಾಡಿನ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಆಸ್ಕರ್‌ವರೆಗೂ ತಲುಪಿದೆ. ಸ್ವಂತ ಪರಿಶ್ರಮದಿಂದ ಬೆಳೆದ ಅವರು ತೆಲಂಗಾಣದ ಯುವಕರಿಗೆ ಮಾರ್ಗದರ್ಶಕ ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಆಸ್ಕರ್ ವೇದಿಕೆಯಲ್ಲಿ ಹಾಡುವ ಅಪರೂಪದ ಗೌರವವನ್ನು ರಾಹುಲ್ ಸಿಪ್ಲಿಗಂಜ್ ಪಡೆದಿದ್ದಾರೆ.
Comments are closed.