Tirupati: 300 ರೂ. ಟಿಕೆಟ್ ಇಲ್ಲದೆಯೇ ಸಿಗಲಿದೆ ತಿರುಪತಿ ತಿಮ್ಮಪ್ಪನ ದರ್ಶನ: TTDಯಿಂದ ಹೊಸ ಆಯ್ಕೆ

Share the Article

Tirupati: ತಿರುಮಲ (Tirupati) ಶ್ರೀನಿವಾಸನ ದರ್ಶನಕ್ಕೆ ಜನ ₹300 ಟಿಕೆಟ್ ಬುಕ್ ಮಾಡಿ ಟೂರ್ ಪ್ಲಾನ್ ಮಾಡ್ತಾರೆ. ಆದ್ರೆ ಈ ಟಿಕೆಟ್ ಇಲ್ಲದೇಯೂ ಕಡಿಮೆ ಸಮಯದಲ್ಲಿ ಶ್ರೀನಿವಾಸನ ದರ್ಶನ ಪಡೆದುಕೊಳ್ಳಬಹುದು.

ಆಗಸ್ಟ್‌ನಲ್ಲಿ ದರ್ಶನಕ್ಕೆ ಇನ್ನೊಂದು ಆಯ್ಕೆ ಕೊಡ್ತಿದೆ ಟಿಟಿಡಿ. ಜುಲೈ 25ರಂದು ಬೆಳಗ್ಗೆ 10 ಗಂಟೆಗೆ ‘ಶ್ರೀ ಶ್ರೀನಿವಾಸ ದಿವ್ಯಾನುಗ್ರಹ ಹೋಮ’ದ ವಿಶೇಷ ದರ್ಶನ ಟಿಕೆಟ್ ಸಿಗುತ್ತೆ. ಒಂದು ಟಿಕೆಟ್ ಬೆಲೆ ₹1600 ಆಗಿದೆ. ಈ ಒಂದು ಟಿಕೆಟ್‌ನಲ್ಲಿ ಇಬ್ಬರು ಭಕ್ತರು ಹೋಗಬಹುದು. ಟಿಕೆಟ್ ಬುಕ್ ಮಾಡಿದವರು ಅಲಿಪಿರಿಯ ಸಪ್ತಗೃಹದಲ್ಲಿ ಹಾಜರ್ ಆಗಬೇಕು.

25 ರಂದು ದಿನ ಬೆಳಗ್ಗೆ 9 ಗಂಟೆ ಒಳಗೆ ಹಾಜರ್ ಆಗಬೇಕು. ಹೋಮ 11 ಗಂಟೆ ಒಳಗೆ ಮುಗಿಯುತ್ತೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ₹300 ವಿಶೇಷ ದರ್ಶನದ ಕ್ಯೂನಲ್ಲಿ ಸ್ವಾಮಿ ದರ್ಶನ ಮಾಡಬಹುದು.

Comments are closed.