Hosakannada: ‘ಹೊಸಕನ್ನಡ’ ಪತ್ರಿಕೆಯ ನೂತನ ಸಾರಥಿಯಾಗಿ, ಚೀಫ್ ಎಡಿಟರ್ ಆಗಿ ಶ್ರೀ ಉದಯ ಕುಮಾರ್ ಆಯ್ಕೆ

Share the Article

Hosakannada: ಹೊಸಕನ್ನಡ ಪತ್ರಿಕೆಯ ನೂತನ ಸಾರಥಿಯಾಗಿ, ಮುಖ್ಯಸ್ಥರಾಗಿ ಶ್ರೀ ಉದಯ ಕುಮಾರ್ ರವರು ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮದಲ್ಲಿ ಸುದೀರ್ಘ 26 ವರ್ಷಗಳ ಅನುಭವ ಮತ್ತು ಕಟುವಾದ ಪರಿಸ್ಥಿತಿಗಳಲ್ಲಿ ಕೂಡಾ ಪತ್ರಿಕೆಯನ್ನು ನಡೆಸಬಲ್ಲ ಚಾತುರ್ಯ ಇರುವ ಶ್ರೀ ಉದಯ ಕುಮಾರ್ ತಕ್ಷಣದಿಂದ ಹೊಸಕನ್ನಡ ಪತ್ರಿಕೆಯ ಸಂಪಾದಕರಾಗಿ, ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಕಬಡ್ಡಿ ಆಟಗಾರರಾಗಿ ಸಾರ್ವಜನಿಕ ಜೀವನ ಪ್ರಾರಂಭಿಸಿದ ಉದಯ್ ಕುಮಾರ್ ರವರು ನಂತರ ರಾಷ್ಟ್ರೀಯ ಕಬಡ್ಡಿಯ ರೆಫ್ರಿ ಕೂಡ ಆದವರು. ತದನಂತರ, ಕರಾವಳಿ ಮಾರುತ, ಜಯಕಿರಣ ಇತ್ಯಾದಿ ಪತ್ರಿಕೆಗಳಲ್ಲಿ ಸುದೀರ್ಘ ಕಾರ್ಯ ನಿರ್ವಹಿಸಿದ ಈ ಕರೇಜಿಯಸ್ ಪತ್ರಕರ್ತರ ಸೇರ್ಪಡೆಯಿಂದ ನಮ್ಮ ತಂಡ ಮತ್ತಷ್ಟು ಬಲ ಮತ್ತು ಉತ್ಸಾಹ ಪಡೆದುಕೊಂಡಿದೆ.

ಇವತ್ತಿಗೆ ಹೊಸಕನ್ನಡ ವೆಬ್ ಪತ್ರಿಕೆಯು ದಿನನಿತ್ಯ 2 ಲಕ್ಷ ಪೇಜು ವ್ಯೂನೊಂದಿಗೆ ದಿನದಿoದ ದಿನಕ್ಕೆ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಜತೆಗೆ, ಜನಪರ ನಿಲುವುಗಳಿಗೆ, ಅನ್ ಬಯಾಸ್ಡ್ ವರದಿಗಳಿಗೆ, ನೇರ ಮತ್ತು ಕ್ರಿಯೇಟಿವ್ ಬರಹಗಳಿಗೆ ಜನ ಮನ್ನಣೆ ಗಳಿಸಿಕೊಳ್ಳುತ್ತಿದೆ. ಇದೀಗ ಪತ್ರಿಕೆಯ ಮುಖ್ಯ ಸಂಪಾದಕರಾಗಿ, ಪಬ್ಲಿಶರ್ ಆಗಿ, ಪತ್ರಿಕೆಗೆ ಬೇಕಾದ ವಸ್ತು, ವಿಷಯ, ಸುದ್ದಿ ಅಂಕಣ, ಸಂಪಾದಕೀಯ ಮುಂತಾದ ಎಲ್ಲಾ ಆಯ್ಕೆಗಳು ಮತ್ತು ಆ ಸಂಬಂಧಿತ ಪ್ರತಿಯೊಂದು ಜವಾಬ್ದಾರಿಯೂ, ಜತೆಗೆ ತಕ್ಕ ಉತ್ತರದಾಯಿತ್ವ ಕೂಡಾ ಶ್ರೀಯುತ ಉದಯ ಕುಮಾರ್ ರದ್ದಾಗಿರಲಿದೆ.

ಹೊಸ ಕನ್ನಡ ತಂಡ ನಿಮ್ಮ ನೇತೃತ್ವದಲ್ಲಿ ಮುನ್ನಡೆಯಲು ನಾವು ಉತ್ಸುಕತೆಯಿಂದ ಕಾಯುತ್ತಿದ್ದೇವೆ.

ಶುಭಾಶಯಗಳು ಸರ್,

ಹೊಸಕನ್ನಡ ತಂಡ

Comments are closed.