Pantanjali Phone : ಪತಂಜಲಿ 6ಜಿ ಮೊಬೈಲ್ ಮಾರುಕಟ್ಟೆಗೆ ಲಗ್ಗೆ? 250 MP ಕ್ಯಾಮೆರಾ, 1TB ಸ್ಟೋರೇಜ್ – ಬೆಲೆ ಎಷ್ಟು?

Patanjali Phone: ಭಾರತದ ಒಂದು ಸೂಪರ್ ಬ್ರಾಂಡ್ ಆಗಿ ರೂಪುಗೊಂಡಿರುವ ಪತಂಜಲಿ 6G ತಯಾರಿಸಿದ್ದು ಮಾರುಕಟ್ಟೆಗೆ ತೆರಲು ಸಿದ್ದತೆ ನಡೆಸಿದೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗಿದ್ರೆ ಯಾವ ಫೋನ್ ಅದು? ಏನದರ ಫ್ಯೂಚರ್? ಬೆಲೆ ಎಷ್ಟು ಇಲ್ಲಿದೆ ನೋಡಿ ಡೀಟೇಲ್ಸ್.

ಹೌದು, ಪತಂಜಲಿ ಇದೀಗ 6ಜಿ ಮೊಬೈಲ್ ಬಿಡುಗಡೆ ಆಗಲಿದೆ. FMCG ಬ್ರ್ಯಾಂಡ್ ಆದ ಪತಂಜಲಿ ಸುಧಾರಿತ ತಂತ್ರಜ್ಞಾನದ ಸ್ಮಾರ್ಟ್‌ಫೋನ್ ಮಾಡುವ ಕುರಿತು ಸುದ್ದಿಗಳು ಹರಿದಾಡಿವೆ.
ಮೊಬೈಲ್ ಫ್ಯೂಚುರ್ಸ್:
ಡಿಸ್‌ಪ್ಲೇ: 6.74-ಇಂಚಿನ ಸೂಪರ್ AMOLED ಡಿಸ್‌ಪ್ಲೇ, 144Hz ರಿಫ್ರೆಶ್ ರೇಟ್
ಪ್ರೊಸೆಸರ್ : ಪತಂಜಲಿ 6ಜಿ ಮೊಬೈಲ್ ಸ್ನಾಪ್‌ಡ್ರಾಗನ್ 8 ಜೆನ್ 4 ಮತ್ತು ಮಿಡಿಯಾ ಟೆಕ್ Dimensity 8200 ಪ್ರೊಸೆಸರ್ ಹೊಂದಿದೆ.
RAM ಮತ್ತು ಸಂಗ್ರಹಣೆ: 12GB RAM ವರೆಗೆ ಮತ್ತು 1TB ಅಥವಾ 2TB ವರೆಗೆ ಆಂತರಿಕ ಸಂಗ್ರಹಣೆ.
ಬ್ಯಾಟರಿ: 7000mAh ಬ್ಯಾಟರಿ, 200W ವೇಗದ ಚಾರ್ಜಿಂಗ್ ಬೆಂಬಲ (ಕೇವಲ 15 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗಬಹುದು ಎಂದು ವದಂತಿ).
ಬಾಳಿಕೆ: ಧೂಳು ಮತ್ತು ನೀರಿನ ಪ್ರತಿರೋಧಕ (Dust and water resistant) ಸಾಮರ್ಥ್ಯ.
ವಿಶಿಷ್ಟ ವೈಶಿಷ್ಟ್ಯಗಳು (ವಿಶೇಷವಾಗಿ ಗಮನಿಸಬೇಕಾದವು):
“ಹರ್ಬಲ್, ವೈರಸ್-ಮುಕ್ತ ಮತ್ತು ಬ್ಯಾಕ್ಟೀರಿಯಾ-ಮುಕ್ತ” ಫೋನ್.
ಸೌರಶಕ್ತಿಯಿಂದ ಚಾರ್ಜ್ ಮಾಡುವ ಸಾಮರ್ಥ್ಯ.
ಭಾರತೀಯವಾಗಿ ಅಭಿವೃದ್ಧಿಪಡಿಸಿದ ಚಿಪ್‌ಸೆಟ್‌ಗಳು.
“ಭಾರತ್ ಓಎಸ್” ಎಂಬ ಸ್ಥಳೀಯ ಆಪರೇಟಿಂಗ್ ಸಿಸ್ಟಮ್.
ಆಯುರ್ವೇದ ಮತ್ತು ಯೋಗ ಆಧಾರಿತ ಆರೋಗ್ಯ ಮೇಲ್ವಿಚಾರಣಾ ಸಾಮರ್ಥ್ಯಗಳು.
ಬೆಲೆ ಎಷ್ಟು?
₹20,000 ರಿಂದ ₹33,000 ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬೆಲೆಯು ಅಂತಹ “ಪ್ರೀಮಿಯಂ” ವೈಶಿಷ್ಟ್ಯಗಳಿಗೆ ತೀರಾ ಕಡಿಮೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ ಇದು ಸುಳ್ಳು ಸುದ್ದಿಯಾಗಿದ್ದು, 2017 ರಿಂದಲೂ ಕೂಡ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದರೆ ಪತಂಜಲಿ ಸಂಸ್ಥೆ ಈ ಫೋನಿನ ಕುರಿತು ಅಥವಾ ಬಿಡುಗಡೆಯ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಸದ್ಯಕ್ಕೆ ದೊರೆತ ಮಾಹಿತಿಗಳ ಪ್ರಕಾರ ಇದು ಒಂದು ಊಹಪೂಹ ಎನ್ನಲಾಗಿದೆ.
Comments are closed.