CM Siddaramiah : ‘ಸ್ಟೇಜ್ ಮೇಲೆ ಇದ್ದವರ ಹೆಸರು ಮಾತ್ರ ಹೇಳುತ್ತೇನೆ’ ಎಂದ ವಿಚಾರ – ಡಿಕೆಶಿ ಎದುರೇ ಸಿಎಂ ಸಿದ್ದು ಹೇಳಿದ್ದೇನು?

Share the Article

CM Siddaramiah : ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಾಧನ ಸಮಾವೇಶದಲ್ಲಿ ಮಾತನಾಡುವ ಸಂದರ್ಭ ಸಿಎಂ ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರ ಹೆಸರನ್ನು ಹೇಳಲು ಇಚ್ಚಿಸದೆ ಸಾಕಷ್ಟು ಸುದ್ದಿಯಾಗಿದ್ದರು. ಬಳಿಕ ವೇದಿಕೆ ಮೇಲೆ ಇರುವವರ ಹೆಸರನ್ನು ಮಾತ್ರ ಹೇಳುತ್ತೇನೆ ಎಂದು ಸಮಾಜ ನೀಡಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲ ಸಿಕ್ಕಾಪಟ್ಟೆ ಟ್ರೂಲ್ ಆಗಿತ್ತು. ಇದೀಗ ಈ ವಿಚಾರವಾಗಿ ಡಿಕೆ ಶಿವಕುಮಾರ್ ಎದುರಿಗೆ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ. ಹೌದು, ಸಾಧನಾ ಸಮಾವೇಶದಲ್ಲಿ ಡಿಸಿಎಂಗೆ ಸಿಎಂ ಅವಮಾನ ಆಗುವ ರೀತಿ ಮಾತಾಡಿದ್ರು ಎಂಬ ಚರ್ಚೆಯ ನಡುವೆಯೇ ಸಿಎಂ ಸಿದ್ದರಾಮಯ್ಯ (Siddaramaiah) ಇವತ್ತು ಡಿಕೆ ಶಿವಕುಮಾರ್ (DK Shivakumar) ಸಮ್ಮುಖದಲ್ಲೇ ಸ್ಪಷ್ಟೀಕರಣ ರೂಪದ ತಿರುಗೇಟು ನೀಡಿದ್ದು, ನಾನು ಡಿಕೆ ಶಿವಕುಮಾರ್‌ಗೆ ಅವಮಾನ ಮಾಡಿಲ್ಲ. ಅವರು ಸಭೆಯಲ್ಲಿ ಇಲ್ಲದ ಕಾರಣ ಅವರ ಹೆಸರು ಹೇಳಲಿಲ್ಲ ಅಷ್ಟೆ. ಇದರಲ್ಲಿ ಅವಮಾನದ ಪ್ರಶ್ನೆ ಎಲ್ಲಿಂದ ಬಂತು? ಬಿಜೆಪಿ ನನ್ನ ಮತ್ತು ಡಿಸಿಎಂ ಸಂಬಂಧ ಕೆಡಿಸಿ ಅದರ ರಾಜಕೀಯ ಲಾಭ ಪಡೆಯುವ ಭ್ರಮೆಯಲ್ಲಿ ಇದ್ದಾರೆ ಅಂತ ಕಿಡಿ ಕಾರಿದರು. ಸಮಾವೇಶದಿಂದ ಅರ್ಧಕ್ಕೆ ಎದ್ದು ಹೋದ ಬಗ್ಗೆ ಸ್ಪಷ್ಟೀಕರಣ ಕೊಟ್ಟ ಡಿಕೆ ಶಿವಕುಮಾರ್, ನಾನು ಪೂರ್ವ ನಿಗದಿತ ಮೀಟಿಂಗ್ ಇದ್ದ ಕಾರಣ ದೆಹಲಿಗೆ ಹೋಗಿದ್ದೆ. ನನ್ನ ಲಾಯರ್ ಭೇಟಿ ಆಗಬೇಕಿತ್ತು. ಇದು ವೈಯಕ್ತಿಕ ವಿಚಾರ. ರಾಜಕೀಯ ಚರ್ಚೆಗೆ, ಸಭೆಗೆ ನಾನು ದೆಹಲಿಗೆ ಹೋಗಿಲ್ಲ. ಬಿಜೆಪಿಗೆ ನನ್ನ ಮೇಲೆ ಯಾವಾಗಲೂ ಪ್ರೀತಿ ಜಾಸ್ತಿ ಎಂದರು.

Comments are closed.