Health tips: ಬಾಯಿಯಲ್ಲಿರುವ ಜೊಲ್ಲು (ಉಗುಳು) ನಿಮ್ಮ ಅನೇಕ ಕಾಯಿಲೆಗಳನ್ನು ಗುಣಪಡಿಸುತ್ತದೆ – ಇದನ್ನು ಬಳಸೋದು ಹೇಗೆ?

Health tips: ನಾವು ಬಾಲ್ಯದಲ್ಲಿ ಆಟವಾಡುವಾಗ ಕೆಳಗೆ ಬಿದ್ದು ಗೀಚಿದಾಗ, ಜೊಲ್ಲು ಅಥವಾ ಉಗುಳನ್ನು ನೋಯುತ್ತಿರುವ ಜಾಗಕ್ಕೆ ಹಚ್ಚಿ, ತಕ್ಷಣ ಮತ್ತೆ ಆಟವಾಡಲು ಪ್ರಾರಂಭಿಸುತ್ತಿದ್ದೆವು. ನಿಮಗೆ ನೆನಪಿದೆಯೇ. ಆದರೆ ನಾವು ಬೆಳೆದಂತೆ, ನಾವು ಈ ವಿಷಯಗಳನ್ನು ಮರೆತುಬಿಡುತ್ತೇವೆ ಮತ್ತು ನಂತರ ಪ್ರತಿ ಚಿಕ್ಕ ಪುಟ್ಟ ಸಮಸ್ಯೆಗಾಗಿ ವೈದ್ಯರನ್ನು ಭೇಟಿ ಮಾಡಲು ಪ್ರಾರಂಭಿಸಿದ್ದೇವೆ.

ಏನೇ ಆದರೂ, ಇವು ನಮ್ಮ ಬಾಲ್ಯದ ಸಂಗತಿಗಳು. ಜೊಲ್ಲು ಎಂದಾಕ್ಷಣ ಛೀ!….ಥೂ!!….ಹೊಲಸು!…. ಎಂಬ ಜಿಗುಪ್ಸೆ ಎಲ್ಲರಿಗೂ ಬರುವುದು ಸಹಜ. ಆದರೆ ತಿಳಿದೋ ತಿಳಿಯದೆಯೋ ನಾವೆಲ್ಲರೂ ಇದನ್ನು ದಿನವೊಂದಕ್ಕೆ ಸರಾಸರಿ ಒಂದು ಲೀಟರ್ಗಿಂತಲೂ ಹೆಚ್ಚು ಪ್ರಮಾಣದಲ್ಲಿ ನುಂಗುತೇವೆ ಎಂದರೆ ನಂಬಿಕೆಯಾಗುತ್ತದೆಯೆ? ಆದರಿದು ಸತ್ಯ! ಇದು ಸದಾ ನಮ್ಮ ಬಾಯಲ್ಲಿಯೇ ತಯಾರಾಗುತ್ತಲೇ ಇರುತ್ತದೆ ಮತ್ತು ನಾವು ತಿಳಿಯದೆ ಅದನ್ನು ನಿರಂತರವಾಗಿ ನುಂಗುತ್ತಲೇ ಇರುತ್ತೇವೆ ಎಂಬುದನ್ನು ನೆನಪಿಡಬೇಕು.
ಈ ನಮ್ಮ ಜೊಲ್ಲು ಅಥವಾ ಲಾಲಾರಸದಲ್ಲಿ ಕೆಲವು ಕಿಣ್ವಗಳು, ಉಪಯುಕ್ತ ಬ್ಯಾಕ್ಟೀರಿಯಾಗಳು ಮತ್ತು ಉಪಯುಕ್ತ ಜೀವರಸಾಯನಗಳು ಇರುತ್ತವೆ. ಇಂದು ನಾವು ಲಾಲಾರಸದ ಉಚಿತ ಔಷಧದ ಪ್ರಯೋಜನಗಳನ್ನು ಮತ್ತು ಅದನ್ನು ಹೇಗೆ ಬಳಸುವುದು ಎಂಬುದನ್ನು ಇಲ್ಲಿ ನೋಡಲಿದ್ದೇವೆ. ಕೆಳಗೆ ತಿಳಿಸಲಾದ ಎಲ್ಲಾ ಪರಿಹಾರಗಳನ್ನು ಮಾಡಲು, ರಾತ್ರಿ ಮಲಗುವ ಮೊದಲು ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಿ ಮತ್ತು ಬೆಳಿಗ್ಗೆ ಹಲ್ಲುಜ್ಜದೆ, ಬಾಯಿ ಮುಕ್ಕಳಿಸದೆ ಅಥವಾ ಉಗುಳದೆ ಈ ಕೆಳಗಿನ ವಿಧಾನಗಳನ್ನು ಮಾಡಬೇಕು… (ನಿಮ್ಮ ಸ್ವಂತ ಜೊಲ್ಲನ್ನೇ ನೀವು ಬಳಸಬೇಕು ಬೇರೆಯವರ ಜೊಲ್ಲನ್ನು ಬಳಸಬಾರದು!)…
– ಬಾಯಿಯಲ್ಲಿರುವ ಜೊಲ್ಲು ದೇಹಕ್ಕೆ ಅಮೃತವಿದ್ದಂತೆ. ಈ ಕೆಳಗಿನ ಪರಿಹಾರಗಳು ಕ್ರಮೇಣ ನಿಮ್ಮ ಕನ್ನಡಕದ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಾರಂಭಿಸುತ್ತವೆ ಮತ್ತು ಒಂದು ದಿನ ನೀವು ಕನ್ನಡಕವಿಲ್ಲದೆ ಸಾಮಾನ್ಯ ದೃಷ್ಟಿಯನ್ನು ಹೊಂದಬಹುದು. ನೀವು ಬೆಳಿಗ್ಗೆ ಎದ್ದಾಗ, ನಿಮ್ಮ ಹಲ್ಲುಗಳನ್ನು ಬಾಯಿ ಮುಕ್ಕಳಿಸದೆ ಅಥವಾ ಹಲ್ಲುಜ್ಜದೆ, ನಿಮ್ಮ ಕಣ್ಣುಗಳಿಗೆ ಕಾಡಿಗೆಯನ್ನು ಹಚ್ಚುವ ರೀತಿಯಲ್ಲಿ ಜೊಲ್ಲನ್ನು ಹಚ್ಚಿಕೊಳ್ಳಿ. ನೀವು ಬೆಳಿಗ್ಗೆ 5 ಗಂಟೆಗೆ ಈ ಉಗುಳನ್ನು ಹಚ್ಚಿಕೊಂಡರೆ ಅನುಕೂಲ. ಏಕೆಂದರೆ, ತದನಂತರ, 1-2 ಗಂಟೆಗಳ ನಂತರ, ನೀವು ನಿಮ್ಮ ಮುಖ ತೊಳೆದರೆ / ಸ್ನಾನ ಮಾಡಿದರೆ, ಲಾಲಾರಸವು ಅದರ ಕೆಲಸವನ್ನು ಪೂರ್ಣಗೊಳಿಸುತ್ತದೆ.
– ರಾಜೀವ್ ದೀಕ್ಷಿತ್ ಹೇಳುತ್ತಾರೆ, ಈ ಪ್ರಯೋಗವು ಅತ್ಯಂತ ಯಶಸ್ವಿಯಾಗಿದೆ ಮತ್ತು ನಿಮ್ಮ ಕನ್ನಡಕವನ್ನು ತ್ಯಜಿಸಲು ಸಹಾಯಕವಾಗಿದೆ. ಆದರೆ, ಇದಕ್ಕಾಗಿ ನೀವು ನಿಯಮಿತವಾಗಿ ಈ ಪರಿಹಾರವನ್ನು ಮಾಡಬೇಕು. ಏಕೆಂದರೆ, ಕ್ರಮೇಣ ನಿಮ್ಮ ಕನ್ನಡಕದ ಸಂಖ್ಯೆ ಶೂನ್ಯಕ್ಕೆ ಬರುತ್ತದೆ ಮತ್ತು ಲಾಲಾರಸದಿಂದ ಯಾವುದೇ ದುಷ್ಪರಿಣಾಮವಿಲ್ಲ. ಲಾಲಾರಸವು ದೃಷ್ಟಿಯನ್ನು ಹೆಚ್ಚಿಸುತ್ತದೆ
– ನಿಮ್ಮ ಕಣ್ಣುಗಳ ಕೆಳಗೆ ಕಪ್ಪು ವಲಯಗಳಿದ್ದರೆ, ನೀವು ಬೆಳಿಗ್ಗೆ ಎದ್ದಾಗ, ಲಾಲಾರಸದಿಂದ ನಿಧಾನವಾಗಿ ಮಸಾಜ್ ಮಾಡಿ, ಇದು ನಿಮ್ಮ ಕಣ್ಣಿನ ಕೆಳಗಿನ ಕಪ್ಪು ವಲಯಗಳನ್ನು ಕ್ರಮೇಣ ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಚರ್ಮವನ್ನು ಸಾಮಾನ್ಯಗೊಳಿಸುತ್ತದೆ, ನೀವು ಪ್ರತಿದಿನ ಕನಿಷ್ಠ 3 ತಿಂಗಳುಗಳವರೆಗೆ ಈ ಪ್ರಯೋಗವನ್ನು ಮಾಡಬೇಕು.
– ಇನ್ನೊಂದು ಬಹಳ ಮುಖ್ಯವಾದ ಪರಿಹಾರ ಏನೆಂದರೆ, ಮಧುಮೇಹ ಇರುವವರಿಗೆ ಗಾಯವಾದರೆ ಅದು ವಾಸಿಯಾಗುವುದಿಲ್ಲ ಎಂದು ನಿಮಗೆ ತಿಳಿದಿದೆ ಮತ್ತು ಗಾಯದಿಂದಾಗಿ ಅನೇಕ ಬಾರಿ ನೋವು ಕೈಕಾಲು ಕತ್ತರಿಸುವ ಹಂತಕ್ಕೆ ಹೆಚ್ಚಾಗುತ್ತದೆ ಎಂದು ನಿಮಗೆ ತಿಳಿದಿದೆ. ಆದ್ದರಿಂದ, ತುಂಬಾ ಜನ ಈ ಸರಳ ಮತ್ತು ಸುಲಭ ಪರಿಹಾರವನ್ನು ಬಳಸುತ್ತಾರ. ಇದು ನಿಮ್ಮನ್ನು ನಿಷ್ಕ್ರಿಯಗೊಳಿಸುವುದರಿಂದ ಕಾಪಾಡಬಹುದು. ಆದ್ದರಿಂದ, ಪರಿಹಾರವೆಂದರೆ, ಮಧುಮೇಹಿಗಳಿಗೆ ಗಾಯವಾಗಿದ್ದರೆ, ಬೆಳಿಗ್ಗೆ ಎದ್ದ ನಂತರ ಗಾಯಕ್ಕೆ ಬಾಯಿಯಿಂದ ಲಾಲಾರಸವನ್ನು ಹಚ್ಚಬೇಕು, ಇದರಿಂದ ಗಾಯವು ನಿಧಾನವಾಗಿ ವಾಸಿಯಾಗಲು ಪ್ರಾರಂಭಿಸುತ್ತದೆ.
– ಸುಟ್ಟಗಾಯಗಳಿಂದ ಚರ್ಮದ ಮೇಲೆ ಕಪ್ಪು ಕಲೆಗಳಿದ್ದರೆ ಬೆಳಿಗ್ಗೆ ಜೊಲ್ಲಿನಿಂದ ಕಲೆಗಳಿಗೆ ಮಸಾಜ್ ಮಾಡಬೇಕು. ಇದರಿಂದ ಕ್ರಮೇಣ ಮಚ್ಚೆ ಮಾಯವಾಗುತ್ತದೆ ಮತ್ತು ಸಾಮಾನ್ಯ ಚರ್ಮದ ಬಣ್ಣಕ್ಕೆ ಮರಳುತ್ತದೆ. ತುರಿಕೆಯಿಂದ ಬಳಲುತ್ತಿರುವವರು ಸೋಂಕಿತ ಭಾಗಕ್ಕೆ ಉಜ್ಜದೆ ಪ್ರತಿದಿನ ಬೆಳಿಗ್ಗೆ ಲಾಲಾರಸವನ್ನು ಹಚ್ಚಬೇಕು. ಕಾಲಾನಂತರದಲ್ಲಿ, ಚರ್ಮವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಈ ರೀತಿಯಾಗಿ ಲಾಲಾರಸವು ಅನೇಕ ರೋಗಗಳ ವಿರುದ್ಧ ಪರಿಣಾಮಕಾರಿಯಾಗಿದೆ.
ಲಾಲಾರಸದಲ್ಲಿ ಏನಿದೆ ಎಂದು ತಿಳಿಯೋಣ…
ಲಾಲಾರಸದಲ್ಲಿ ಟಯಾಲಿನ್(ptyalin) ಎಂಬ ಕಿಣ್ವವಿದ್ದು ಅದು ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಸ್ನೇಹಿತರೇ, ಯಾವುದೇ ಕೆಟ್ಟ ಅಭ್ಯಾಸಗಳು ಇಲ್ಲದಿದ್ದರೆ ಇದು ಉತ್ತಮವಾಗಿ ಕೆಲಸ ಮಾಡುತ್ತದೆ. ಗುಟ್ಕಾ, ತಂಬಾಕು ತಿಂದು ಹಾಗೆ ಉಗುಳಿದರೆ ಕ್ರಮೇಣ ಈ ಲಾಲಾರಸ ಉತ್ಪಾದನೆ ನಿಂತು ಬಾಯಿ ಕ್ಯಾನ್ಸರ್ ಬರುವ ಅಪಾಯ ಹೆಚ್ಚುತ್ತದೆ. ಲಾಲಾರಸದ Ph ಸುಮಾರು 8.3 ಇರುತ್ತದೆ. ಅಲ್ಲದೆ, ನಾವು ಟೂತ್‌ಪೇಸ್ಟ್ ಅನ್ನು ಬೆಳಿಗ್ಗೆ ಬಳಸುವುದನ್ನು ನಿಲ್ಲಿಸಬೇಕು. ಏಕೆಂದರೆ, ಅದು ಲಾಲಾರಸವನ್ನು ಉಗುಳುವಂತೆ ಮಾಡುತ್ತದೆ. ಬದಲಿಗೆ ಬೇವು ಅಥವಾ ಅಕೇಶಿಯಾದಿಂದ ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ. ಅಂತಹ ಹಲ್ಲುಗಳನ್ನು ಸ್ವಚ್ಛಗೊಳಿಸುವ ಮೂಲಕ ಈ ಲಾಲಾರಸವು ಹೆಚ್ಚು ಉತ್ಪತ್ತಿಯಾಗುತ್ತದೆ, ಅದರ ಔಷಧಿ ಗುಣಗಳು ವೃದ್ಧಿಯಾಗುತ್ತವೆ. ನೀವು ಬೇವು ಅಥವಾ ಅಕೇಶಿಯಾ ಕಡ್ಡಿಯಿಂದ ಹಲ್ಲುಜ್ಜಲು ಹೋದರೆ, ನೀವು ಬಳಸಿದ ಕಡ್ಡಿಯ ತುದಿಯನ್ನು ಕತ್ತರಿಸಿ ಉಳಿದವನ್ನು ನೀರಿನಲ್ಲಿ ಇರಿಸಿ ಮತ್ತು ಮರುದಿನ ಬೆಳಿಗ್ಗೆ ನಿಮ್ಮ ಹಲ್ಲುಗಳನ್ನು ಕಡ್ಡಿಯಿಂದ ಮತ್ತೆ ಸ್ವಚ್ಛಗೊಳಿಸಿ.
ರಾತ್ರಿ ಚೆನ್ನಾಗಿ ಹಲ್ಲುಜ್ಜಿ ಬಾಯಿ ತೊಳೆದು ಮಲಗಿದರೆ ಬೆಳಗ್ಗೆದ್ದು ಬಾಯಿ ತೊಳೆಯದೆ ಅಥವಾ ಉಗುಳದೆ ಲಾಲ್ಹರಸವನ್ನು ಕಣ್ಣಿಗೆ ಹಚ್ಚಿಕೊಂಡ ನಂತರ ಕೆಳಗೆ ಕುಳಿತು ನೇರವಾಗಿ 2-3 ಲೋಟ ಬೆಚ್ಚಗಿನ ನೀರು ಕುಡಿಯಬೇಕು. ನೀರನ್ನು ನಿಧಾನವಾಗಿ ಒಂದೊಂದೇ ಗುಟುಕು ಕುಡಿಯಬೇಕು. ನೀರಿನೊಂದಿಗೆ ಬೆರೆತು ಜಠರ ಸೇರುವ ಲಾಲಾರಸವು ಪಿತ್ತ, ಆಮ್ಲತೆ, ಗ್ಯಾಸ್, ಮಲಬದ್ಧತೆ ಇತ್ಯಾದಿ ಹೊಟ್ಟೆ ಹಾಗು ಕರುಳಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯಕವಾಗುತ್ತದೆ.
ಸಂಗ್ರಹ ಮತ್ತು ಸಂಪಾದನೆ: ಶ್ರೀ ರಾಜೀವ್ ದೀಕ್ಷಿತ್ ಅವರ ಉಪನ್ಯಾಸಗಳಿಂದ
– ಡಾ. ಪ್ರ. ಅ. ಕುಲಕರ್ಣಿ
ಇದನ್ನೂ ಓದಿ: Bomb threat: ಗುರುದ್ವಾರಕ್ಕೂ ಬಂತು ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ!
Comments are closed.