Home News KMF: ನಂದಿನಿ ಹಾಲಿನ ಪ್ಯಾಕೆಟ್ ಗೆ ಹೊಸ ರೂಪ – ಇದರ ಹಿಂದಿದೆ ಸಾಕಷ್ಟು ವಿಶೇಷತೆ!!

KMF: ನಂದಿನಿ ಹಾಲಿನ ಪ್ಯಾಕೆಟ್ ಗೆ ಹೊಸ ರೂಪ – ಇದರ ಹಿಂದಿದೆ ಸಾಕಷ್ಟು ವಿಶೇಷತೆ!!

Hindu neighbor gifts plot of land

Hindu neighbour gifts land to Muslim journalist

KMF: ಇತ್ತೀಚಿಗಷ್ಟೇ ಕೆಎಂಎಫ್ ನಂದಿನಿ ತುಪ್ಪದ ಪ್ಯಾಕೆಟ್ ಗೆ ಹೊಸ ರೂಪವನ್ನು ನೀಡಿ ಬಿಡುಗಡೆ ಮಾಡಿತ್ತು. ಈ ಬೆನ್ನಲ್ಲೇ ನಂದಿನಿ ಹಾಲಿನ ಪ್ಯಾಕೆಟ್ ಗೋ ಹೊಸ ರೂಪವನ್ನು ನೀಡಲು ಸಂಸ್ಥೆ ನಿರ್ಧರಿಸಿದೆ. ಅಲ್ಲದೇ ಇದರ ಹಿಂದೆ ಸಾಕಷ್ಟು ವಿಶೇಷತೆ ಕೂಡ ಅಡಗಿದೆ.

ಹೌದು, ಇದೀಗ ನಂದಿನಿ ಬ್ರಾಂಡ್ ತನ್ನ ವಿವಿಧ ಉತ್ಪನ್ನಗಳ ಪ್ಯಾಕೆಟ್ಗಳ ಬದಲಾವಣೆಯ ಪ್ರಭಾವವನ್ನು ಆರಂಭಿಸಿದೆ. ಇದೀಗ ನಂದಿನಿ ಹಾಲಿನ ಪ್ಯಾಕೆಟ್‌ ವಿಚಾರದಲ್ಲೂ ಬದಲಾವಣೆ ಶುರುವಾಗಿದೆ. ಇಲ್ಲಿವರೆಗೆ ಬಳಸುತ್ತಿದ್ದ ಹಾಲಿನ ಪ್ಯಾಕೆಟ್‌ಗಳಿಗೆ ಗುಡ್‌ಬೈ ಹೇಳಲಾಗುತ್ತಿದ್ದು, ಪರಿಸರಸ್ನೇಹಿ ಕ್ರಮಕ್ಕೆ ಮುಂದಾಗಿದೆ. ಈ ಹೊಸ ಪ್ರಯತ್ನ ದೇಶದಲ್ಲೇ ಮೊದಲು ಎನ್ನಲಾಗುತ್ತಿದೆ.

ಅಂದಹಾಗೆ ಕೆಎಂಎಫ್ ನ ನಂದಿನಿ ಹಾಲು ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಶೇ 100ರಷ್ಟು ಬಯೋಡಿಗ್ರೇಡಬಲ್ ಹಾಲು ಪ್ಯಾಕೆಟ್‌ಗಳನ್ನು ಪರಿಚಯಿಸುತ್ತಿದೆ. ಈ ಪ್ಯಾಕೆಟ್‌ಗಳು ಮೆಕ್ಕೆಜೋಳ (ಕಾರ್ನ್‌ ಸ್ಟಾರ್ಚ್), ಕಬ್ಬು ಮತ್ತು ಇತರ ಸಸ್ಯಾಧಾರಿತ ವಸ್ತುಗಳಿಂದ ತಯಾರಾಗುತ್ತವೆ. ವಿದೇಶಿ ತಂತ್ರಜ್ಞಾನದಲ್ಲಿ ಈ ಪ್ಯಾಕೆಟ್ ಹೊರತರಲಾಗಿದ್ದು, ಹಾಳಾದ ಪ್ಲಾಸ್ಟಿಕ್ ಪ್ಯಾಕೆಟ್‌ಗಳಿಗೆ ಪರ್ಯಾಯ ಮಾರ್ಗ ಎಂದು ಹೇಳಲಾಗುತ್ತಿದೆ. ಇದ್ರಿಂದ ಇಲ್ಲಿವರೆಗೆ ತನ್ನ ರುಚಿ, ಗುಣಮಟ್ಟದಿಂದ ಹೆಸರುವಾಸಿಯಾಗಿರುವ ನಂದಿಯು ಇದೀಗ ತನ್ನ ಪ್ಯಾಕೆಟ್‌ ವಿಚಾರದಲ್ಲೂ ಪರಿಸರ ಸ್ನೇಹಿ ಕ್ರಾಂತಿಗೆ ಮುಂದಾಗಿದೆ.

ಹೊಸ ಪ್ಯಾಕೆಟ್‌ನ ವಿಶೇಷತೆ ಏನು?

ಸಾಮಾನ್ಯ ಪ್ಲಾಸ್ಟಿಕ್ ಪ್ಯಾಕೆಟ್‌ಗಳು ಭೂಮಿಯಲ್ಲಿ ಕುಸಿದುಹೋಗಲು ಹಲವು ವರ್ಷಗಳಿಗಿಂತ ಹೆಚ್ಚಿನ ಸಮಯ ಬೇಕು. ಪ್ರಸ್ತುತ ಹಾಲಿನ ಪ್ಯಾಕೆಟ್‌ಗೆ ಬಳಸುವ ಪಾಲಿಥಿನ್‌ ಕವರ್‌ ಮಣ್ಣಲ್ಲಿ ಕರಗುವುದು ನಿಧಾನ. ಆದರೆ, ನಂದಿನಿಯ ಹೊಸ ಪ್ಯಾಕೆಟ್‌ಗಳು ಕೇವಲ 90 ದಿನಗಳಲ್ಲಿ ಅಥವಾ ಸುಮಾರು 6 ತಿಂಗಳಲ್ಲಿ ಮಣ್ಣಿನಲ್ಲಿ ಕರಗುತ್ತವೆ. ಕರ್ನಾಟಕದಲ್ಲಿ ಪ್ರತಿದಿನ 20-25 ಲಕ್ಷದಷ್ಟು ಪ್ಲಾಸ್ಟಿಕ್ ಹಾಲಿನ ಪ್ಯಾಕೆಟ್‌ಗಳು ಬಳಕೆಯಾಗುತ್ತಿದ್ದು, ಪರಿಸರದ ಮೇಲೆ ಬೀರುತ್ತಿರುವ ದುಷ್ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಈ ವಿನೂತನ ಪ್ಯಾಕೆಟ್‌ಗಳು ಪ್ರಮುಖ ಪಾತ್ರ ವಹಿಸಲಿವೆ.

ಇದನ್ನೂ ಓದಿ: SIM Card: ಸಿಮ್ ಕಾರ್ಡ್ನ ಒಂದು ಮೂಲೆಯನ್ನು ಕಟ್ ಮಾಡೋದ್ಯಾಕೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಷಯ