Fahad Fazil: ಐಫೋನ್ ಯುಗದಲ್ಲಿ ನಟ ಫಹಾದ್ ಫಾಸಿಲ್ ಬಳಸೋದು ಕೀಪ್ಯಾಡ್ ಫೋನ್ – ಆದ್ರೆ ಇದರ ಬೆಲೆ ಮಾತ್ರ ₹10 ಲಕ್ಷ !!

Share the Article

Fahad Fazil: ಇದು ಐ ಫೋನ್ ಯುಗ. ಸಾಮಾನ್ಯ ಯುವಕ ಯುವತಿಯರಿಂದ ಹಿಡಿದು ದೊಡ್ಡ ಸ್ಟಾರ್ ಗಳು ಕೂಡ ಐಫೋನ್ ಬಳಸುತ್ತಾರೆ. ಐಫೋನ್ ಇಟ್ಟುಕೊಂಡರೆ ಅವರನ್ನು ನೋಡುವ ರೀತಿಯೇ ಬೇರೆ. ಆದರೆ ನಟ ಫಹಾದ್ ಅವರು ನಿರ್ದೇಶಕ ಅಭಿನವ್ ಸುಂದರ್ ಅವರ ಮಾಲಿವುಡ್ ಟೈಮ್ಸ್‌ ಸಿನಿಮಾದ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದು ಈ ಸಂದರ್ಭದಲ್ಲಿ ಅವರು ಕೀಪ್ಯಾಡ್ ಫೋನ್ ಬಳ ಸುತ್ತಿರುವುದು ಕಂಡುಬಂದಿದೆ. ಈ ವೇಳೆ ಅದನ್ನು ಕುಲಂಕುಶವಾಗಿ ಪರಿಶೀಲಿಸಿದಾಗ ಆ ಕೀಪ್ಯಾಡ್ ಮೊಬೈಲ್ ಬೆಲೆ ಬರೋಬ್ಬರಿ 10 ಲಕ್ಷ ಎಂಬುದು ತಿಳಿದು ಬಂದಿದೆ.

ಹೌದು, ನಟ ಫಹಾದ್ ಅವರು ಕೀಪ್ಯಾಡ್ ಬಳಸುತ್ತಿರುವುದನ್ನು ಕಂಡು ಅನೇಕರು ಇದು ಅವರ ಸರಳತೆಯ ಸಂಕೇತ ಎಂಬಿತ್ಯಾದಿ ಒಕ್ಕಣೆಯೊಂದಿಗೆ ಸಾಮಾಜಿಕ ಮಾದ್ಯಮಗಳಲ್ಲಿ ದೃಶ್ಯ ಸಹಿತ ರೀಲ್ಸ್‌, ಮೀಮ್ಸ್‌ಗಳು ಓಡಾಡುತ್ತಿವೆ. ಆದರೆ ಅಸಲಿಗೆ ಫಹಾದ್ ಬಳಸುತ್ತಿದ್ದ ಆ ಕೀಪ್ಯಾಡ್‌ ಇರುವ ‘ಸರಳ’ ಫೋನ್‌ನ ಬೆಲೆ ₹10 ಲಕ್ಷ ಎಂದರೆ ಎದೆಯೇ ಒಮ್ಮೆ ಝಲ್ ಎನ್ನುತ್ತದೆ.

ಹೌದು, ಬ್ರಿಟನ್‌ನ ಫೋನ್‌ ತಯಾರಕ ಕಂಪನಿ ವರ್ಟು ಈ ವಿಲಾಸಿ ಫೋನ್‌ಗಳನ್ನು ತಯಾರಿಸುತ್ತದೆ. ‘ಆಸೆಂಟ್‌ ರೆಟ್ರೊ ಕ್ಲಾಸಿಕ್‌ ಕೀಪ್ಯಾಡ್‌’ ಎಂಬ ಫೋನ್‌ ಇದಾಗಿದ್ದು, ಇದರ ಬೆಲೆ 11,920 ಅಮೆರಿಕನ್ ಡಾಲರ್‌ (₹10.27 ಲಕ್ಷ) ಎಂದು ವರ್ಟು ತನ್ನ ಅಧಿಕೃತ ಅಂತರ್ಜಾಲ ಪುಟದಲ್ಲಿದೆ.

ಇನ್ನು ವರ್ಟು ಫೋನಿನ ಬೆಲೆಯು 1 ಲಕ್ಷದಿಂದ 70 ಲಕ್ಷದವರೆಗೆ ಪ್ರೀಮಿಯಂ ಆಯ್ಕೆಗಳೊಂದಿಗೆ ವಿವಿಧ ಮಾದರಿಗಳಲ್ಲಿಯೂ ಲಭ್ಯವಿದೆಯಂತೆ. ಹಾಗೆಂದು ಕೇಳಿದವರಿಗೆಲ್ಲ ಅಥವಾ ಹಣ ಇದ್ದವರಿಗೆಲ್ಲ ಈ ಫೋನ್ ಸಿಗಲಾರದು ಯಾಕೆಂದರೆ ಫೋನು ಖರೀದಿಸುವವರ ಪ್ರೊಫೈಲ್ ಪರೀಕ್ಷೆ ಮಾಡಿದ್ದ ಬಳಿಕವೇ ಫೋನ್ ಅನ್ನು ನೀಡುವ ನಿಯಮ‌ ಕೂಡ ಇಲ್ಲಿದೆ.

ಏನಿದರ ಫ್ಯೂಚರ್?

ಫೋನ್‌ 2008ರಲ್ಲಿ ತಯಾರಾಗಿತ್ತು. ಅತ್ಯಂತ ಶ್ರೇಷ್ಠ ಗುಣಮಟ್ಟದ ಫೋನ್‌ ಆಗಿದ್ದ ‘ಆಸೆಂಟ್‌ ರೆಟ್ರೊ ಕ್ಲಾಸಿಕ್‌ ಕೀಪ್ಯಾಡ್‌’ ಸದ್ಯ ಬಳಕೆಯಲ್ಲಿಲ್ಲ. ಟೈಟಾನಿಯಂ ಲೋಹದಿಂದ ಇದರ ಹೊರಕವಚ ಸಿದ್ಧಪಡಿಸಲಾಗಿದೆ. ಅದಕ್ಕೆ ಚರ್ಮದ ಕವಚವಿದ್ದು, ಅದನ್ನು ಕೈಯಿಂದ ಹಾಕಲಾಗಿದೆ. ಬ್ಯೂಟೂತ್, ಜಿಪಿಆರ್‌ಎಸ್‌, ಎಸ್‌ಎಂಎಸ್ ಹಾಗೂ ಎಂಎಂಎಸ್‌ ಸೌಕರ್ಯಗಳಿವೆ. 170 ರಾಷ್ಟ್ರಗಳನ್ನು ಪ್ರತಿಕ್ಷಣವೂ ಸಂಪರ್ಕಿಸಲು ಸಾಧ್ಯವಾಗುವ ಗುಂಡಿಯನ್ನು ಈ ಫೋನ್ ಹೊಂದಿದೆ. ಈ ಫೋನ್‌ 173 ಗ್ರಾಂ ತೂಕವಿದ್ದು, 22 ಮಿ.ಮೀ. ದಪ್ಪವಿದೆ. ಕೀಪ್ಯಾಡ್‌ಗಳು ಶ್ರೇಷ್ಠ ಗುಣಮಟ್ಟದ ಸ್ಟೈನ್‌ಲೆಸ್‌ ಸ್ಟೀಲ್‌ನಿಂದ ತಯಾರಿಸಲಾಗಿದೆ.

ಇದನ್ನೂ ಓದಿ: Ekka Movie : ಕನ್ನಡಿಗರ ಮನ ಗೆದ್ದ ‘ಎಕ್ಕ’ ಸಿನಿಮಾ – ಮೊದಲ ದಿನದ ಗಳಿಕೆ ಎಷ್ಟು?

Comments are closed.