Kodagu Rain: ಕೊಡಗು ಗಡಿಯಲ್ಲಿ ಭಾರಿ ಮಳೆ – ಮಂಞಡ್ಕ ನದಿಯಲ್ಲಿ ಬೈಕ್ ಸಮೇತ ಕಾರ್ಮಿಕ ಕೊಚ್ಚಿ ಹೋಗಿರುವ ಶಂಕೆ

Kodagu Rain: ಕೊಡಗು ಜಿಲ್ಲೆಯ ಮತ್ತು ಕೇರಳದ ಕಾಸರಗೋಡು ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಮಂಞಡ್ಕ ನದಿಯಲ್ಲಿ ಕಾರ್ಮಿಕ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು ತೀವ್ರ ಶೋಧ ಕಾರ್ಯ ನಡೆಸಲಾಗಿದೆ. ಬೆಳಗಾಂನಿಂದ ರಬ್ಬರ್ ಪ್ಲಾಂಟೇಷನ್ ನಲ್ಲಿ ಹಿಟಾಚಿ ಕೆಲಸಕ್ಕೆ ಆಗಮಿಸಿದ್ದ ತಂಡಲ್ಲಿ ಇದ್ದ ಸಹಾಯಕನಾಗಿದ್ದ ದುರ್ಗಪ್ಪ ಮಾದರ (19) ಊಟ ತರಲೆಂದು ಸೇತುವೆ ದಾಟಿ ಕರಿಕೆಗೆ ಬೈಕ್ ನಲ್ಲಿ ತೆರಳಿದ್ದ ಎನ್ನಲಾಗಿದೆ.

ಹಲವು ಸಮಯ ಕಳೆದರು ದುರ್ಗಪ್ಪ ವಾಪಸು ಬರದಿರುವ ಹಿನ್ನಲಲೆ ಹಿಟಾಚಿ ಚಾಲಕ ತನ್ನ ಪತ್ನಿಗೆ ಕರೆ ಮಾಡಿದ್ದ್ದು, ದುರ್ಗಪ್ಪ ಬಂದಿಲ್ಲ ಎಂದು ತಿಳಿದು ಬಂದಿದೆ. ಇದೆ ಸಮಯದಲ್ಲಿ ಭಾರಿ ಮಳೆಗೆ ಸೇತುವೆ ಮುಳುಗಿದ್ದು, ಸ್ಥಳದಲ್ಲಿ ಬೈಕ್ ನ ಗುರುತುಗಳು ಪತ್ತೆಯಾಗಿದ್ದು ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತ ವಾಗಿರುವ ಹಿನ್ನಲೆಯಲ್ಲಿ ಕಾಸರಗೋಡಿನ ಅಗ್ನಿ ಶಾಮಕ ಮತ್ತು NDRF ತಂಡ ಸುಮಾರು 5 ಕಿಲೋಮೀಟರು ವರೆಗೆ ಶೋಧ ಕಾರ್ಯ ನಡೆಸಿದೆ. ಬೆಳಗಾವಿಯಿಂದ ಮೃತನ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.
Comments are closed.