Tiruvananthapuram: ಪುತ್ರಿಯ ಮೇಲೆ 3 ವರ್ಷ ನಿರಂತರ ಲೈಂಗಿಕ ದೌರ್ಜನ್ಯ: ತಂದೆಗೆ ಮೂರು ಜೀವಾವಧಿ ಶಿಕ್ಷೆ, ಸಾಯುವ ತನಕ ಜೈಲು

Share the Article

Tiruvananthapuram: ತನ್ನ ಅಪ್ರಾಪ್ತ ಪುತ್ರಿಯ ಮೇಲೆ 3ವರ್ಷ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಕೇರಳದ ಇಡುಕ್ಕಿ ಫಾಸ್ಟ್‌ ಟ್ರ್ಯಾಕ್‌ ವಿಶೇಷ ನ್ಯಾಯಾಲಯ 3 ಜೀವಾವಧಿ ಶಿಕ್ಷೆ ವಿಧಿಸಿದೆ.

5 ವರ್ಷದವಳಾಗಿದ್ದು, ಎಂಟು ವರ್ಷದವಳಾಗುವವರೆಗೆ ಸತತ ಮೂರು ವರ್ಷ ಕಾಲ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದ ವ್ಯಕ್ತಿಗೆ 3 ಜೀವಾವಧಿ ಶಿಕ್ಷೆ ಜೊತೆಗೆ 3 ಲಕ್ಷ ರೂ. ದಂಡ ವಿಧಿಸಲಾಗಿದೆ.

ಕರಿಮನೂರ್‌ ಬಳಿಯ ಬಾಡಿಗೆ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ. 2020 ರಲ್ಲಿ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡಾಗ ಕೃತ್ಯ ಬೆಳಕಿಗೆ ಬಂದಿದೆ.

ತಾಯಿ ಬಾಲಕಿಯಲ್ಲಿ ಏನಾಗಿದೆ ಎಂದು ಸಮಾಧಾನದಿಂದ ವಿವರವಾಗಿ ಕೇಳಿದಾಗ ಮತ್ತು ಕೌನ್ಸೆಲಿಂಗ್‌ ಸಮಯದಲ್ಲಿ ತನ್ನ ತಂದೆಯ ಕೃತ್ಯದ ಕುರಿತು ಹೇಳಿದ್ದಾಳೆ. ಕರಿಮನೂರ್‌ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪೋಕ್ಸೋ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಇಡುಕ್ಕಿ ಫಾಸ್ಟ್‌ ಟ್ರ್ಯಾಕ್‌ ವಿಶೇಷ ನ್ಯಾಯಾಲಯ 3 ಜೀವಾವಧಿ ಶಿಕ್ಷೆ ವಿಧಿಸಿದೆ.

ಸಾಯುವವರೆಗೂ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಸಾರ್ವಜನಿಕ ಅಭಿಯೋಜಕ ಶಿಜೋಮನ್‌ ಜೋಸೆಫ್‌ ತಿಳಿಸಿದ್ದಾರೆ.

Comments are closed.