Apaar ID: ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ ‘ಅಪಾರ್‌ ಐಡಿ’: ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ

Share the Article

Apaar ID: ಅಂಗನವಾಡಿ ಬಳಿಕ ಶಾಲೆಗೆ ಸೇರುವ ಮಕ್ಕಳ ಅನುಕೂಲಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 12 ಸಂಖ್ಯೆಯ ಅಪಾರ್‌ ಐಡಿಯನ್ನು(ಅಟೋಮೆಟೆಡ್‌ ಪರ್ಮನೆಂಟ್‌ ಅಕಾಡೆಮಿಕ್‌ ಅಕೌಂಟ್‌ ರಿಜಿಸ್ಟ್ರಿ) ಶೀಘ್ರ ಜಾರಿಗೆ ತರಲಿದ್ದು, ದೇಶದಲ್ಲೇ ಈ ಯೋಜನೆ ಜಾರಿಗೆ ತರುತ್ತಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.

ಈ ಐಡಿಯಿಂದಾಗಿ (Apaar ID) ಅಂಗನವಾಡಿಗೆ ಸೇರ್ಪಡಗೊಂಡ ಮಗು, ಮುಂದಿನ ಶಿಕ್ಷಣಕ್ಕಾಗಿ ದೇಶದ ಯಾವುದೇ ಭಾಗದಲ್ಲಿರುವ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆಯಲು ಸಹಾಯಕವಾಗಲಿದೆ. ಮಕ್ಕಳ ‘ಕ್ರೆಡಿಟ್’ ಗುರುತಿಸುವಿಕೆ, ವರ್ಗಾವಣೆ ಪತ್ರದ(ಟಿಸಿ) ಪ್ರಕ್ರಿಯೆಗಳನ್ನು ಇದು ಸರಳಗೊಳಿಸುತ್ತದೆ. ಶೈಕ್ಷಣಿಕ ಪ್ರಗತಿ ಮತ್ತು ಹಿಂದಿನ ಕಲಿಕೆಯ ಗುರುತಿಸುವಿಕೆಯೂ ಸುಗಮವಾಗಲಿದೆ.

ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ‘ಒನ್‌ ನೇಷನ್‌, ಒನ್‌ ಸ್ಟೂಡೆಂಟ್‌ ಐಡಿ’ ಯೋಜನೆಯಡಿ ಅಪಾರ್‌ ಐಡಿಯನ್ನು ಕರ್ನಾಟಕದ ಅಂಗನವಾಡಿ ಕೇಂದ್ರಗಳಲ್ಲಿ ಜಾರಿಗೆ ತರಲಾಗುತ್ತಿದೆ. ದೇಶಾದ್ಯಂತ ಈ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಅಂಗನವಾಡಿಗೆ ದಾಖಲಾಗುವ ವೇಳೆ ಪಾಲಕರ/ಪೋಷಕರ ವಿವರ, ತಂದೆ-ತಾಯಿಯ ಮೊಬೈಲ್‌ ಸಂಖ್ಯೆ, ಆಧಾರ್‌ ಸಂಖ್ಯೆ, ಜನನ ಪ್ರಮಾಣ ಪತ್ರವನ್ನೂ ಇದಕ್ಕಾಗಿ ನೀಡಬೇಕು. ಈ ಮಾಹಿತಿಯನ್ನು ಪೋಷಣ್‌ ಟ್ರ್ಯಾಕರ್‌ನಲ್ಲಿ ಭರ್ತಿ ಮಾಡಿದರೆ ಅಪಾರ್‌ ಐಡಿ ಸಿಗಲಿದೆ. ಪ್ರತಿ ಮಕ್ಕಳಿಗೂ ಕಾರ್ಡ್‌ ನೀಡಲಿದ್ದು, ಇದರಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಅಂಶಗಳೆಲ್ಲ ಇರಲಿವೆ.

ಇದನ್ನೂ ಓದಿ: F-35 jet: ಯಾರಿಗುಂಟು? ಯಾರಿಗಿಲ್ಲ? – F-35 ಪಾರ್ಕಿಂಗ್‌ನಿಂದ ದಿನಕ್ಕೆ ₹26,261 ಗಳಿಸುತ್ತಿರುವ ತಿರುವನಂತಪುರಂ ವಿಮಾನ నిಲ್ದಾಣ

Comments are closed.