Prateek Chauhan: ಮದ್ವೆಯಾಗ್ತೀನಿ ಅಂತ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ ಆರೋಪ: ಮಾಜಿ ಸಚಿವ ಪುತ್ರನ ವಿರುದ್ಧ ದೂರು!

Share the Article

Prateek Chauhan: ಮಾಜಿ ಸಚಿವರೂ, ಬೀದರ್‌ನ ಔರಾದ್‌ ಕ್ಷೇತ್ರದ ಬಿಜೆಪಿ ಶಾಸಕರೂ ಆಗಿರುವ ಪ್ರಭು ಚೌಹಾಣ್‌ (Prabhu Chauhan) ಪುತ್ರನ ವಿರುದ್ಧ ಯುವತಿಯೊಬ್ಬರು ಮಹಿಳಾ ಆಯೋಗಕ್ಕೆ (Womenʼs Commission) ದೂರು ನೀಡಿದ್ದಾರೆ.

ಪ್ರಭು ಚೌಹಾಣ್‌ ಅವರ ಪುತ್ರ ಪ್ರತೀಕ್‌ ಚೌಹಾಣ್‌ (Prateek Chauhan) ತನ್ನನ್ನ ಮದುವೆಯಾಗೋದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಯುವತಿಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಔರಾದ್‌ನ ಹೋಕ್ರಾಣಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರೆ, ಪೊಲೀಸರು ದೂರು ಸ್ವೀಕರಿಸಿಲ್ಲ. ಹೀಗಾಗಿ ಆಯೋಗಕ್ಕೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Coorg Tourism: ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆ : ಕಳೆದ ಎರಡುವರೆ ವರ್ಷದಲ್ಲಿ 95 ಲಕ್ಷಕ್ಕೂ ಹೆಚ್ಚು ಪ್ರವಾಸಿಗರ ದಂಡು

Comments are closed.