Milk: ತೆರಿಗೆ ಕಟ್ಟದ ಕಾರಣ: ಜುಲೈ 23 ರಿಂದ 3 ದಿನಗಳ ಕಾಲ ಹಾಲು ಮಾರಾಟ ಬಂದ್ ಆಗುತ್ತಾ?

Share the Article

Bundh: ಹಾಲಿನ ಮಾರಾಟವನ್ನು ಆನ್ಲೈನ್ ವಹಿವಾಟಿನ ಮೂಲಕ ನಡೆಸುತ್ತಿರುವ ಬೇಕರಿ, ಕಾಂಡಿಮೆಂಟ್ಸ್, ಕಾಫಿ-ಟೀ ಅಂಗಡಿಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಕಣ್ಣಿಟ್ಟಿದ್ದು, ಜಿಎಸ್ ಟಿ ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ನೀಡಿದ್ದಾರೆ.

ಜುಲೈ 21 ರ ಒಳಗೆ ತೆರಿಗೆ ಪಾವತಿ ಮಾಡದಿದ್ದಲ್ಲಿ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕುವಂತೆ ಇಲಾಖೆ ಎಚ್ಚರಿಕೆ ನೀಡಿದ್ದು, ಇದನ್ನು ಮನ್ನಾ ಮಾಡುವಂತೆ ಸರ್ಕಾರ ಹಾಗೂ ತೆರಿಗೆ ಇಲಾಖೆಗೆ ಈಗಾಗಲೇ ಮಾರಾಟಗಾರರು ಮನವಿ ಸಲ್ಲಿಸಿದ್ದು, ಹತ್ತು ದಿನಗಳ ಗಡುವು ನೀಡಿದ್ದಾರೆ.

ಇಲಾಖೆಯ ಈ ಕ್ರಮದ ವಿರುದ್ಧವಾಗಿ ಅಂಗಡಿ ಮಾಲೀಕರುಗಳು ಜುಲೈ 23, 24, 25 ರಂದು ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟ ಬಂದ್ ಮಾಡುತ್ತಾರೆ ಎನ್ನಲಾಗುತ್ತಿದ್ದು, 25 ರಂದು ರಾಜ್ಯಾದ್ಯಂತ ಕಾಂಡಿಮೆಂಟ್ಸ್, ಬೇಕರಿ, ಚಹಾ , ಬೀಡ ಅಂಗಡಿಗಳು ಬಂದ್ ಆಗಲಿವೆ. ಹಾಗೂ ಸಿಗರೇಟ್ ಮತ್ತು ತರಕಾರಿ ಅಂಗಡಿಗಳ ಬಂದ್ ಗೂ ವರ್ತಕರು ಚಿಂತಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Comments are closed.