Swachh Cities: ಭಾರತದ ಸ್ವಚ್ಛ ನಗರಗಳ ಹೆಸರು ಪ್ರಕಟ – ಯಾವ ನಗರ ಅಗ್ರಸ್ಥಾನದಲ್ಲಿದೆ?

Swachh Cities: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆಯೋಜಿಸಿದ್ದ ಸ್ವಚ್ಛ ಸರ್ವೇಕ್ಷಣ 2024-25 ಪ್ರಶಸ್ತಿಗಳಲ್ಲಿ, ಇಂದೋರ್ ಸತತ ಎಂಟನೇ ಬಾರಿಗೆ ಭಾರತದ ಅತ್ಯಂತ ಸ್ವಚ್ಛ ನಗರ ಪ್ರಶಸ್ತಿಯನ್ನು ಪಡೆದುಕೊಂಡರೆ, ಸೂರತ್ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದೆ. ಈ ವಿಭಾಗದಲ್ಲಿ ನವಿ ಮುಂಬೈ (ಮೂರನೇ ಸ್ಥಾನ) ಮತ್ತು ವಿಜಯವಾಡ (ನಾಲ್ಕನೇ ಸ್ಥಾನ) ಇತರ ಸ್ವಚ್ಛ ನಗರಗಳಾಗಿವೆ.

ಗುರುವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಆಯೋಜಿಸಿದ್ದ ರಾಷ್ಟ್ರೀಯ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಗರ ಸ್ವಚ್ಛತೆಗಾಗಿ ಪ್ರತಿಷ್ಠಿತ ಸ್ವಚ್ಛ ಸರ್ವೇಕ್ಷಣ್ 2024-25 ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಇದು ಒಂಬತ್ತನೇ ಆವೃತ್ತಿಯ ಸಮೀಕ್ಷೆಯಾಗಿದ್ದು, ಸ್ವಚ್ಛ ಸರ್ವೇಕ್ಷಣ್ (SS) 2024-25 ವಿಶ್ವದ ಅತಿದೊಡ್ಡ ನಗರ ಸ್ವಚ್ಛತಾ ಮತ್ತು ಸ್ವಚ್ಛ ಭಾರತ ಮಿಷನ್-ಅರ್ಬನ್ (SBM-U) ನ ಪ್ರಮುಖ ಆಧಾರಸ್ತಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಭಾರತದ ಅತ್ಯಂತ ಸ್ವಚ್ಛ ನಗರಗಳ ಹೆಸರು ಅನಾವರಣಗೊಳಿಸಲಾಗಿದ್ದು, ಈ ಅಭಿಯಾನವನ್ನು ಮುನ್ನಡೆಸುವಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಮಾಡಿದ ಅತ್ಯುತ್ತಮ ಪ್ರಯತ್ನಗಳಿಗೂ ಗೌರವಿಸಲಾಯ್ತು.
ಈ ವರ್ಷದ ಪ್ರಶಸ್ತಿಗಳನ್ನು ನಾಲ್ಕು ಪ್ರಮುಖ ವಿಭಾಗಗಳಲ್ಲಿ ನೀಡಲಾಗಿದೆ. ಸೂಪರ್ ಸ್ವಚ್ಛ ಲೀಗ್ (SSL) ನಗರಗಳು, ಐದು ವಿಭಿನ್ನ ಜನಸಂಖ್ಯೆ ವಿಭಾಗಗಳಲ್ಲಿ ಅಗ್ರ ಮೂರು ಸ್ವಚ್ಛ ನಗರಗಳು, ಗಂಗಾ ಪಟ್ಟಣಗಳು, ಕಂಟೋನ್ಮೆಂಟ್ ಮಂಡಳಿಗಳು, ಸಫಾಯಿ ಮಿತ್ರ ಸುರಕ್ಷಾ ಮತ್ತು ಮಹಾಕುಂಭ ಸೇರಿದಂತೆ ವಿಶೇಷ ವರ್ಗಗಳು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸ್ವಚ್ಛ ನಗರಗಳ ಭರವಸೆಗಾಗಿ ರಾಜ್ಯ ಮಟ್ಟದ ಪ್ರಶಸ್ತಿಗಳು. ಸಮಾರಂಭದಲ್ಲಿ ಒಟ್ಟು 78 ಪ್ರಶಸ್ತಿಗಳನ್ನು ನೀಡಲಾಯ್ತು.
Comments are closed.