Nonveg Cow’s : ಅಮೇರಿಕಾದಲ್ಲಿವೆ ಮಾಂಸಾಹಾರಿ ಹಸುಗಳು – ರಕ್ತ ಕುಡಿಯೋದು, ಪ್ರಾಣಿಗಳ ಮಾಂಸ, ಕೊಬ್ಬು ತಿನ್ನೋದೇ ಇವುಗಳ ಕೆಲಸ !!

Nonveg Cow’s: ಭಾರತದಲ್ಲಿ ಹೈನುಗಾರಿಕೆ ಮಾತ್ರವಲ್ಲದೆ, ಸಂಸ್ಕೃತಿ ಹಾಗೂ ಧರ್ಮಕ್ಕೂ ಹಸುವಿಗೆ ವಿಶೇಷ ಸ್ಥಾನವಿದೆ. ಇಲ್ಲಿನ ಜನರು ಹಸುವನ್ನು ಗೋ ಮಾತೆ ಎಂದು ಪೂಜಿಸುತ್ತಾರೆ. ಹೀಗಾಗಿ, ಹಸುವಿನ ಹಾಲಿಗೆ ಭಾರೀ ಪವಿತ್ರತೆ ಇದೆ. ಅಲ್ಲದೆ ಭಾರತದಲ್ಲಿರುವ ಎಲ್ಲಾ ಹಸುಗಳು ಕೂಡ ಸಸ್ಯಹಾರಿ. ಆದರೆ ಅಮೆರಿಕದಲ್ಲಿರುವ ಹಸುಗಳು ಮಾಂಸಾಹಾರಿ ಎಂಬುದು ನಿಮಗೆ ಗೊತ್ತಾ? ಅಲ್ಲಿನ ಹಸುಗಳು ಬೇರೆ ಪ್ರಾಣಿಗಳ ರಕ್ತ, ಮಾಂಸ, ಕೊಬ್ಬನ್ನು ತಿನ್ನುತ್ತದೆ ಎಂಬ ವಿಚಾರ ನಿಮಗೆ ತಿಳಿದಿದೆಯಾ?

ಹೌದು, ಆದ್ರೆ ಅಮೆರಿಕಾದಲ್ಲಿ ನಾನ್ ವೆಜ್ ತಿನ್ನುವ ಹಸುಗಳಿವೆ. ಈ ನಾನ್ ವೆಜ್ ಹಸುಗಳು ಬೇರೆ ಹಸುಗಳ ರಕ್ತವನ್ನು ಸಹ ಕುಡಿಯುತ್ತವೆ. ಜೊತೆಗೆ ಅಮೆರಿಕಾದ ಹಸುಗಳು ಮಾಂಸ ತಿನ್ನುತ್ತವೆ. ಬೇರೆ ಹಸುಗಳ ಮಾಂಸವನ್ನ ಸಣ್ಣ ಸಣ್ಣ ಪೀಸ್ ಮಾಡಿ ತಿನ್ನಿಸ್ತಾರೆ. ಈ ಆಹಾರದ ಜೊತೆಯಲ್ಲಿ ಹಂದಿ ಮತ್ತು ಕುದುರೆಯ ರಕ್ತ, ಕೊಬ್ಬು ಮತ್ತು ಪ್ರೋಟೀನ್ ಸಹ ನೀಡಲಾಗುತ್ತದೆ. ಹೀಗಾಗಿ ಇವುಗಳನ್ನು ನಾನ್ ವೆಜ್ ಹಸುಗಳು ಅಂತಾನೇ ಕರೆಯಲಾಗುತ್ತೆ.
ಇತ್ತೀಚೆಗೆ ಭಾರತದೊಂದಿಗೆ ಅನೇಕ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿರುವ ಅಮೆರಿಕ ಇದೀಗ ಹೈನುಗಾರಿಕಾ ಉತ್ಪನ್ನಗಳನ್ನು ಭಾರತಕ್ಕೆ ಕಳುಹಿಸಲು ಚಿಂತನೆ ನಡೆಸಿದೆ. ಆದರೆ ಅಮೆರಿಕದ ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆ ಮುಕ್ತವಾಗಿಸಲು ಭಾರತ ಹಿಂದೇಟು ಹಾಕಿದೆ. ಭಾರತೀಯರು ಮಾಂಸಹಾರಿ ಹಾಲಿನ ಉತ್ಪನ್ನ ಸ್ವೀಕರಿಸಲ್ಲ. ಬೇಕಿದ್ರೆ ಸಸ್ಯಹಾರಿ ಹಾಲನ್ನು ಮಾತ್ರ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡುವದಾಗಿ ಭಾರತ ಹೇಳಿದೆ.
Comments are closed.