Narayan Bharamani : ಸಿಎಂ ಹೊಡೆಯಲು ಕೈಯೆತ್ತಿದ್ದ ASP ಭರಮನಿ DCP ಆಗಿ ಪ್ರಮೋಷನ್!!

Narayan Bharamani: ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಡೆಯಲು ಕೈಯೆತ್ತಿದ್ದ ಏ ಎಸ್ ಪಿ ಬರಮನಿ ಅವರನ್ನು ಇದೀಗ ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ನೇಮಕ ಮಾಡಲಾಗಿದೆ.

ಹೌದು, ಕೆಲವು ಸಮಯದ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ (Dharwad ASP Narayana bharamani) ಅವರಿಗೆ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದರು. ಇದರಿಂದ ತೀವ್ರವಾಗಿ ಮನನೊಂದಿರುವ ಬರಮನಿ ಅವರು ಇದೀಗ ಸ್ವಯಂ ನಿವೃತ್ತಿಗೆ (VRS) ಮನವಿ ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಬಳಿಕ ಸಿದ್ದರಾಮಯ್ಯ ಅವರು ನಾರಾಯಣ ಭರಮನಿ ಅವರಿಗೆ ಫೋನ್ ಮಾಡಿ ಸಮಾಧಾನ ಹೇಳಿದ್ದರು. ಇದೀಗ ಎ ಎಸ್ ಪಿ ನಾರಾಯಣ ಭರಮಣಿ ಅವರನ್ನು ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ನೇಮಕ ಮಾಡಲಾಗಿದೆ.
ಅಂದಹಾಗೆ ಈ ಹಿಂದೆ ನಾರಾಯಣ ಭರಮಣಿ, ಬೆಳಗಾವಿಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿಯೂ ಸೇವೆ ಸಲ್ಲಿಸಿದ್ದರು. ಇದೀಗ ಡಿಎಸ್ ಪಿಯಾಗಿ ಬೆಳಗಾವಿಗೆ ವರ್ಗಾವಣೆಗೊಂಡಿದ್ದಾರೆ
Comments are closed.