Death: ತೂಕ ಇಳಿಸಲು ಆಪರೇಷನ್: ಚಿಕಿತ್ಸೆ ನಡೆದ 2 ದಿನದಲ್ಲೇ ಮಹಿಳೆ ಸಾವು

Share the Article

Death: ತೂಕ ಇಳಿಸಿಕೊಳ್ಳುವ ಸಲುವಾಗಿ ಬೇರಿಯಾಟ್ರಿಕ್ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ 55 ವರ್ಷದ ಮಹಿಳೆಯೊಬ್ಬರು ಮೀರತ್ ನ ಆಸ್ಪತ್ರೆಯಲ್ಲಿ ಮೃತರಾಗಿದ್ದು, ಆಕೆಯ ಕುಟುಂಬಸ್ಥರು ಚಿಕಿತ್ಸೆ ಮಾಡಿದ್ದ ವೈದ್ಯರ ವಿರುದ್ಧವಾಗಿ ಆಸ್ಪತ್ರೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಮೃತರನ್ನು ರಜನಿ ಗುಪ್ತ ಎಂದು ಗುರುತಿಸಲಾಗಿದ್ದು, ಜುಲೈ 11 ರಂದು ಚಿಕಿತ್ಸೆಗೆ ಒಳಗಾಗಿದ್ದರು ಹಾಗೂ 13 ರಂದು ಮೃತರಾಗಿದ್ದಾರೆ. ಇದಾದ ನಂತರ ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರೋಶ ಹೆಚ್ಚಾದಾಗ ಪೊಲೀಸರನ್ನು ಕರೆಸಲಾಗಿದೆ.

ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರ ಆಸ್ಪತ್ರೆಯ ಅಧಿಕಾರಿಗಳು ಕೂಡ ಬಂದಿರುತ್ತಾರೆ.
ರಜನಿ ಗುಪ್ತ ಸೋಷಿಯಲ್ ಮಿಡಿಯದ ಜಾಹೀರಾತೊಂದರಿಂದ ಪ್ರಭಾವಿತರಾಗಿ ಈ ರೀತಿಯಾದ ಚಿಕಿತ್ಸೆ ಮಾಡಿಸಿಕೊಂಡಿದ್ದರು ಎಂದು ಅವರ ಕುಟುಂಬ ಹೇಳಿಕೊಂಡಿದೆ.

Comments are closed.