Crime:ವೇಶ್ಯಾವಾಟಿಕೆಗೆ ನಿರಾಕರಣೆ: ತನ್ನ ಲಿವ್-ಇನ್ ಗೆಳತಿಯನ್ನೇ ಕೊಂದ ಗೆಳೆಯ

Crime:ವೇಶ್ಯಾವಾಟಿಕೆಗೆ ಒಪ್ಪದ ಕಾರಣ ತನ್ನ ಲಿವ್ ವಿನ್ ಸಂಗಾತಿಯನ್ನು ಗೆಳೆಯನೇ ಕೊಂದಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ರಾಜೋಳು ಮಂಡಲ ವ್ಯಾಪ್ತಿಯ ಬಿ ಸವರಂ ಗ್ರಾಮದ ಸಿದ್ಧಾರ್ಥ ನಗರದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಪುಷ್ಪಾ ಎಂಬಾಕೆ ಮೃತ ದುರ್ದೈವಿಯಾಗಿದ್ದಾಳೆ. ಆಕೆಗೆ ಈ ಹಿಂದೆಯೇ ಬೇರೊಬ್ಬರ ಜತೆ ವಿವಾಹವಾಗಿದ್ದು, ಪತಿಯಿಂದ ಬೇರ್ಪಟ್ಟು ಕಳೆದ ಆರು ತಿಂಗಳಿನಿಂದ ಶೇಖ್ ಶಮ್ಮಾ ಜತೆ ವಾಸಿಸುತ್ತಿದ್ದಳು.

ಬುಧವಾರ ರಾತ್ರಿ 10:00 ಸುಮಾರಿಗೆ ಶಮ್ಮಾ ಆಕೆಗೆ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದು, ತನ್ನೊಂದಿಗೆ ತಾನು ಹೇಳಿದ್ದ ಜಾಗಕ್ಕೆ ಬರಬೇಕೆಂದು ಕೇಳಿದ್ದಾನೆ. ಹಾಗೂ ಈ ಸಮಯದಲ್ಲಿ ತೀವ್ರ ವಾಗ್ವಾದ ನಡೆದು ಆಕೆ ನಿರಾಕರಿಸಿದಾಗ ಆತ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಆಕೆಯ ಎದೆಯ ಎಡಭಾಗ ಮತ್ತು ಕಾಲಿಗೆ ಇರಿದಿದ್ದಾನೆ.
ಆತನನ್ನು ತಡೆಯಲು ಯತ್ನಿಸಿದ್ದ ಪುಷ್ಪಾ ತಾಯಿ ಹಾಗೂ ಆಕೆಯ ಸಹೋದರನ ಮೇಲೂ ಶಮ್ಮಾ ಹಲ್ಲೆ ನಡೆಸಿದ್ದಾನೆ.ಅತಿಯಾದ ರಕ್ತಸ್ರಾವದಿಂದ ಪುಷ್ಪಾ ಅಲ್ಲೇ ಕೊನೆಯುಸಿರೆಳೆದಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯ ಹುಡುಕಾಟಕ್ಕೆ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.