Nimisha Priya: ‘ಯಾವುದೇ ಕಾರಣಕ್ಕೂ ಕ್ಷಮಿಸಲ್ಲ’ ಎಂದ ಮೃತನ ಸಹೋದರ -ನರ್ಸ್ ನಿಮಿಷಾ ಪ್ರಿಯಗೆ ಗಲ್ಲು ಶಿಕ್ಷೆ ಬಹುತೇಕ ಫಿಕ್ಸ್!!

Nimisha Priya: ಯೆಮನ್ ನಲ್ಲಿ ಭಾರತೀಯ ಮೂಲದ ನರ್ಸ್ ನಿಮಿಷ ಪ್ರಿಯಾಳಿಗೆ ವಿಧಿಸಲಾಗಿದ್ದಾಗಲೂ ಶಿಕ್ಷೆಯ ದಿನಾಂಕವನ್ನು ಮುಂದೂಡಲಾಗಿತ್ತು. ಶಿಕ್ಷೆಯಿಂದ ನಿಮಿಷ ಪಾರಾಗಬಹುದು ಎಂಬ ಭರವಸೆ ಎಲ್ಲರಲ್ಲೂ ಮೂಡಿತ್ತು. ಆದರೆ ಇದೀಗ ಈ ಭರವಸೆ ಕಮರಿದೆ. ನಿಮಿಷಳ ಅಪರಾಧವನ್ನು ನಮ್ಮ ಕುಟುಂಬವು ಕ್ಷಮಿಸುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಕ್ಷಮಾ ಪರಿಹಾರವನ್ನು(ಬ್ಲಡ್ ಮನಿ) ಸ್ವೀಕರಿಸುವುದಿಲ್ಲ’ ಎಂದು ನಿಮಿಷಳಿಂದ ಹತ್ಯೆಯಾದ ಯೆಮನ್ ಪ್ರಜೆ ತಲಾಲ್ ಅಬ್ದು ಮೆಹ್ದಿ ಸಹೋದರ ಅಬ್ದುಲ್ ಫತ್ತಾಹ್ ಹೇಳಿದ್ದಾರೆ.

ಹೌದು, ಜುಲೈ 14ರಂದು ಬಿಬಿಸಿ ಅರೇಬಿಕ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಫತ್ತಾಹ್, ತಡ ಮಾಡದೇ ನಿಮಿಷಳನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದ್ದು, ‘ಭಾರತದ ಮಾಧ್ಯಮಗಳು ಅಪರಾಧಿಯನ್ನು ಸಂತ್ರಸ್ತೆ ಎನ್ನುವ ರೀತಿ ಬಿಂಬಿಸುತ್ತಿವೆ. ನಿಮಿಷಳಿಗೆ ಮೆಹ್ದಿ ಕಿರುಕುಳ ನೀಡಿದ್ದನು ಮತ್ತು ಆಕೆಯ ಪಾಸ್ಫೋರ್ಟ್ ಅನ್ನು ಇಟ್ಟುಕೊಂಡಿದ್ದನು ಎಂಬ ಸುಳ್ಳನ್ನು ಹರಡುತ್ತಿವೆ. ಈ ಸುಳ್ಳುಗಳಿಂದ ನಮ್ಮ ಕುಟುಂಬಕ್ಕೆ ಇನ್ನಷ್ಟು ನೋವಾಗಿದೆ’ ಎಂದು ಅವರು ಹೇಳಿದ್ದಾರೆ.
ಅಲ್ಲದೆ ಮರಣದಂಡನೆಯ ಮುಂದೂಡಿಕೆಯನ್ನು ಅವರು ‘ದುರದೃಷ್ಟಕರ’ ಎಂದು ತಿಳಿಸಿದ್ದಾರೆ. ಅವರು ಈ ನಿರ್ಧಾರವನ್ನು ನಿರೀಕ್ಷಿಸಿರಲಿಲ್ಲ. ಮರಣದಂಡನೆ ನಿಗದಿಯಾದ ಬಳಿಕ ಅದನ್ನು ಸ್ಥಗಿತಗೊಳಿಸುವುದು ಹೆಚ್ಚು ಕಠಿಣ. ಈ ಪ್ರಕರಣದಲ್ಲಿ ಯಾವುದೇ ರೀತಿಯ ಸಮನ್ವಯ ಅಥವಾ ರಾಜತಾಂತ್ರಿಕ ಒತ್ತಡಗಳನ್ನು ತಿರಸ್ಕರಿಸುತ್ತೇವೆ. ನಾವು ಒತ್ತಡಗಳಿಗೆ ಬಾಗುವುದಿಲ್ಲ. ಪರಿಹಾರ ಹಣದಿಂದ ಕಳೆದುಹೋದ ಜೀವವನ್ನು ಖರೀದಿಸುವುದು ಸಾಧ್ಯವಿಲ್ಲ, ನ್ಯಾಯವನ್ನು ಮರೆಯಲು ಸಾಧ್ಯವಿಲ್ಲ. ಶಿಕ್ಷೆಯು, ವಿಳಂಬವಾದರೂ ಆಗಲೇಬೇಕು. ಸಮಯ ವಿಳಂಬವಾಗಿರಬಹುದು. ದೇವರ ಸಹಾಯದಿಂದ ಅದು ಸಾದ್ಯವಾಗುತ್ತದೆ,” ಎಂದು ಅಬ್ದುಲ್ ಫತ್ತಾಹ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
Comments are closed.