LKG-UKG: ಅಕ್ಟೋಬರ್ ನಿಂದ ಅಂಗನವಾಡಿಗಳಲ್ಲಿ ಎಲ್ ಕೆ ಜಿ ಯುಕೆಜಿ- ಲಕ್ಷ್ಮಿ ಹೆಬ್ಬಾಳ್ಕರ್

Bengaluru: ರಾಜ್ಯದ್ಯಂತ ಅಕ್ಟೋಬರ್ ನಿಂದ ಅಂಗನವಾಡಿಗಳಲ್ಲಿ ಎಲ್ ಕೆ ಜಿ ಹಾಗೂ ಯುಕೆಜಿ ಪ್ರಾರಂಭವಾಗುತ್ತದೆ ಎಂದು ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸಚಿವೆ ಸದ್ಯಕ್ಕೆ 4-5 ಸಾವಿರ ಅಂಗನವಾಡಿಗಳಲ್ಲಿ ತರಬೇತಿಗಳನ್ನು ಪ್ರಾರಂಭ ಮಾಡಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಅಂಗನವಾಡಿಗಳಲ್ಲೂ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
ಗುಣಮಟ್ಟದ ಶಿಕ್ಷಣ ಹಾಗೂ ಪೌಷ್ಟಿಕ ಆಹಾರವನ್ನು ನೀಡುವುದು ಮೂಲ ಗುರಿಯಾಗಿದ್ದು, ಈ ಕಾರಣಕ್ಕಾಗಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಹಾಗೂ ಇಲಖಾವತಿಯಿಂದ ಮಕ್ಕಳಿಗೆ ಸಮವಸ್ತ್ರ ಪುಸ್ತಕಗಳು ಬ್ಯಾಗ್ ಗಳನ್ನು ನೀಡುವುದು ಮತ್ತು ಶಾಲೆಗಳ ಮಾದರಿಯಲ್ಲಿಯೇ ವರ್ಗಾವಣೆ ಪತ್ರ (ಟಿ ಸಿ) ನೀಡುವ ಅಕ್ರಮವನ್ನು ಜಾರಿಗೆ ತರಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ.
Comments are closed.