Kunigal: ‘ಶಕ್ತಿ ಯೋಜನೆ’ ಎಫೆಕ್ಟ್ – ಬಸ್ ನಲ್ಲಿ ಉಸಿರುಗಟ್ಟಿ ‘ಕಾಪಾಡಿ.. ಕಾಪಾಡಿ.. ‘ಎಂದು ಕಿರುಚಿಕೊಂಡ ಮಹಿಳೆ

Share the Article

Kunigal: ಫ್ರೀ ಬಸ್ ಎಫೆಕ್ಟ್ ನಿಂದಾಗಿ ರಾಜ್ಯದ ಎಲ್ಲಾ ಸಾರಿಗೆ ಬಸ್ ಗಳು ಮಹಿಳೆಯರಿಂದ ತುಂಬಿ ತುಳುಕುತ್ತಿದೆ. ಅಂತೆಯೇ ಇದೀಗ ಕೆಎಸ್‌ಆರ್‌ಟಿಸಿ ಬಸ್‌ ಫುಲ್ ರಶ್ ಆದ ಕಾರಣ ಉಸಿರುಗಟ್ಟಿ ಮಹಿಳೆಯೊಬ್ಬರು ಕೂಗಿಕೊಂಡ ಘಟನೆ ತುಮಕೂರಿನ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.

ಹೌದು, ತುಮಕೂರಲ್ಲಿ ಶಕ್ತಿ ಯೋಜನೆಯ ಪರಿಣಾಮದಿಂದಾಗಿ ಬಸ್ನಲ್ಲಿ ರಶ್ ಹೆಚ್ಚಾಗಿ ಮಹಿಳೆಯರಗಳು ಉಸಿರು ಕಟ್ಟಿ ಕಾಪಾಡಿ ಕಾಪಾಡಿ ಎಂದು ಕೂಗಿ ಕೊಂಡಿರುವ ಘಟನೆ ನಡೆದಿದೆ. ಮಹಿಳಾ ಪ್ರಯಾಣಿಕರಿಗಾಗಿ ಸರ್ಕಾರ ನೀಡಿರುವ ಫ್ರೀ ಬಸ್ ಯೋಜನೆ ಹಲವು ಫಜೀತಿ ಸೃಷ್ಟಿ ಮಾಡುತ್ತಿದೆ. ಮೈಸೂರಿನಿಂದ ತುಮಕೂರಿಗೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಮಹಿಳೆಯೊಬ್ಬರು ಉಸಿರುಗಟ್ಟಿ ಕಿರುಚಾಡಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.

ಅಂದಹಾಗೆ ಕುಣಿಗಲ್ನ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹಲವು ಮಹಿಳೆಯರ ತಂಡ ಹೋಗಿತ್ತು. ತುಮಕೂರು ಜಿಲ್ಲೆಯ ಹಲವು ತಾಲೂಕಿನಿಂದ ನೂರಾರು ಮಹಿಳೆಯರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಬಸ್ ಚಲಿಸುವಾಗ ಮಹಿಳೆಯೊಬ್ಬರು ಇದ್ದಕ್ಕಿಂತೆ ‘ಅಯ್ಯಯ್ಯೋ ನನ್ನನ್ನು ಕಾಪಾಡಿ.. ಬಸ್ಸಿನಿಂದ ಕೆಳಗಿಳಿಸಿ ಎಂದು ಕೂಗಿಕೊಂಡಿದ್ದಾಳೆ. ಮಹಿಳೆಯ ಪರಿಸ್ಥಿತಿ ನೋಡಿ ತಕ್ಷಣವೇ ಎಚ್ಚೆತ್ತ ಕಂಡಕ್ಟರ್, ಬಸ್ಸ್ಸ್ ನಿಲ್ಲಿಸಿ ಮಹಿಳೆಯನ್ನು ಕೆಳಗಿಳಿಸಿದ್ದಾರೆ.

ಇದನ್ನೂ ಓದಿ: Session: ಸಂಸತ್ತಿನ ಮಳೆಗಾಲದ ಅಧಿವೇಶ – ಕೇಂದ್ರ ಸರ್ಕಾರ ಯಾವ ಮಸೂದೆಗಳನ್ನು ಮಂಡಿಸಬಹುದು?

Comments are closed.