Yadagiri: ಸೆಲ್ಫಿ ಜಗಳ: ಪತಿಯನ್ನು ನದಿಗೆ ತಳ್ಳಿದ ಪತ್ನಿ ಪ್ರಕರಣ: ದಂಪತಿ ವಿಚ್ಛೇದನ

Yadagiri: ಸೇತುವೆ ಮೇಲೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಜೋಡಿ ಸೆಲ್ಫಿ ವಿಚಾರಕ್ಕೆ ಗಲಾಟೆ ಮಾಡಿ ನದಿಗೆ ತಳ್ಳಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪತಿ ತಾತಪ್ಪ ಮತ್ತು ಪತ್ನಿ ಗದ್ದೆಮ್ಮ ಅವರ ಪ್ರಕರಣ ಇದೀಗ ವಿಚ್ಛೇದನದಲ್ಲಿಗೆ ಬಂದು ತಲುಪಿದೆ.

ಗುರ್ಜಾಪುರ ಸಮೀಪದ ಕೃಷ್ಣಾ ನದಿ ಸೇತುವೆ ಮೇಲೆ ಈ ಘಟನೆ ನಡೆದಿತ್ತು. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ದೇವರಗಡ್ಡಿ ಗ್ರಾಮದಲ್ಲಿ ಪತಿ-ಪತ್ನಿಯ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ ಹಂತಕ್ಕೆ ಬಂದು ನಿಂತಿದೆ.
ಪತಿ ಪತ್ನಿ ಮೇಲೆ ಕೊಲೆ ಯತ್ನ ಆರೋಪ ಮಾಡುತ್ತಿದ್ದಾನೆ. ಈ ಪ್ರಕರಣದಲ್ಲಿ ಪತಿ-ಪತ್ನಿಯ ಆರೋಪ ಹಾಗೂ ಪ್ರತ್ಯಾರೋಪಗಳಿಂದಲೇ ಹೊಸ ಟ್ವಿಸ್ಟ್ ದೊರಕಿದ್ದು, ನಿನ್ನೆ ರಾತ್ರಿ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆದಿದ್ದ, ಪತಿ ತಾತಪ್ಪ ಮತ್ತು ಗದ್ದೆಮ್ಮನಿಂದ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿಸಲಾಗಿದೆ.
ಈ ವಿಚ್ಛೇದನದ ನಂತರ ಗದ್ದೆಮ್ಮ ಕುಟುಂಬ ಮಾನ ಮರ್ಯಾದೆಗೆ ಅಂಜಿ ಮನೆಯಿಂದ ಹೊರಗೆ ಬಂದಿಲ್ಲ. ಮಾಧ್ಯಮ ಸಂಪರ್ಕಕ್ಕೂ ಸಿಕ್ಕಿಲ್ಲ. ವಿವಾಹದ ನಂತರ ಇವರಿಬ್ಬರು ಹೊಂದಾಣಿಕೆಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬದವರು ಹತ್ತಿರದವರ ಹೇಳಿದ್ದಾರೆ. ಹೀಗಾಗಿ ತಾತಪ್ಪ ಮತ್ತು ಗದ್ದೆಮ್ಮ ಇಬ್ಬರೂ ಹಿರಿಯರ ಸಮ್ಮುಖದಲ್ಲಿ 500 ರೂ. ಬಾಂಡ್ ಮೇಲೆ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ದಂಪತಿಯ ದಾಂಪತ್ಯ ಜೀವನಕ್ಕೆ ಅಧಿಕೃತ ತೆರೆ ಬಿದ್ದಂತಾಗಿದೆ.
ಇದನ್ನೂ ಓದಿ: Malayali Nurde Nimisha: ಮಲಿಯಾಳಿ ನರ್ಸ್ ನಿಮಿಷಾ ಗಲ್ಲು ಶಿಕ್ಷೆ ಮುಂದೂಡಿಕೆ
Comments are closed.