Lucknow: ಅಸಹ್ಯ ವಿಡಿಯೋ, ಕೆಟ್ಟ ಸಂಭಾಷಣೆ: ಇಬ್ಬರು ಯುವತಿಯರ ವಿರುದ್ಧ ಕೇಸ್‌

Share the Article

Lucknow: ಸಾಮಾಜಿಕ ಜಾಲತಾಣದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಫೇಮಸ್‌ ಆಗಲು ಲೈಕ್‌, ಕಮೆಂಟ್‌, ವ್ಯೀವ್ಸ್‌ ಗಿಟ್ಟಿಸಿಕೊಳ್ಳಲು ಕೆಲವರು ಅಡ್ಡ ದಾರಿಯನ್ನು ಹಿಡಿಯುತ್ತಾರೆ. ಇಲ್ಲೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ಫೇಮಸ್‌ ಆಗುವುದಕ್ಕೆ ಹೋಗಿ ಹುಡುಗಿಯರಿಬ್ಬರು ಅಸಭ್ಯ ರೀಲ್ಸ್‌ ಮಾಡಿ ಪೋಸ್ಟ್‌ ಮಾಡಿದ್ದು, ಇದೀಗ ಇವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಕೇಸು ದಾಖಲು ಮಾಡಿದ್ದಾರೆ.

ಉತ್ತರ ಪ್ರದೇಶದ ಸಂಭಾಲ್‌ನಲ್ಲೊ ಮೆಹಕ್‌ ಪರಿ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಅಶ್ಲೀಲ ವಿಡಿಯೋ ಪೋಸ್ಟ್‌ ಮಾಡಲಾಗಿದೆ. ಇದರಲ್ಲಿ ಇಬ್ಬರು ಹುಡುಗಿಯರಿದ್ದಾರೆ. ಇವರು ಸಂಭಾಲ್‌ ಜಿಲ್ಲೆಯ ಶಹ್ಬಾಝ್‌ಪುರ ಗ್ರಾಮದವರು. ಕೆಟ್ಟ ಭಾಷೆಯ ಜೊತೆಗೆ ಅಶ್ಲೀಲ ವಿಡಿಯೋವನ್ನು ಇವರಿಬ್ಬರು ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹೀಗಾಗಿ ಪೊಲೀಸರು ಈ ಇಬ್ಬರು ಹುಡುಗಿಯರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಅಸ್ಮೌಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Karnataka Bank : ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದ್ದ ಕನ್ನಡಿಗನ್ನನೇ MD ಆಗಿ ನೇಮಿಸಿದ ಕರ್ನಾಟಕ ಬ್ಯಾಂಕ್!!

Comments are closed.