Plane Crash: ಲಂಡನ್‌ನಲ್ಲಿ ಟೇಕ್ ಆಫ್ ಆದ ಕೂಡಲೇ ವಿಮಾನ ಪತನ

Plane Crash: ಭಾನುವಾರ, ಲಂಡನ್‌ನಲ್ಲಿ ಸಣ್ಣ ವಿಮಾನ ಅಪಘಾತಕ್ಕೀಡಾದ ಸುದ್ದಿ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ಭಾನುವಾರ ಲಂಡನ್‌ನ ಸೌತೆಂಡ್ ವಿಮಾನ ನಿಲ್ದಾಣದಲ್ಲಿ ಸಣ್ಣ ವಿಮಾನ ಅಪಘಾತಕ್ಕೀಡಾಗಿದೆ. ರನ್‌ವೇಯಿಂದ ಹೊರಟ ಸ್ವಲ್ಪ ಸಮಯದ ನಂತರ ವಿಮಾನ ಅಪಘಾತಕ್ಕೀಡಾಗಿದೆ ಎಂದು ಹೇಳಲಾಗಿದೆ.

Tragedy In London: A Beech B200 Super King aircraft crashed shortly before 4pm during takeoff at just crashed at London Southend Airport, causing an enormous fireball! This is a developing story. There is no details yet on casualties or how many were aboard. pic.twitter.com/Dvpd5F5acG
— John Cremeans (@JohnCremeansX) July 13, 2025
ಘಟನೆ ನಡೆದ ಸ್ಥಳದಿಂದ ಬೆಂಕಿಯ ಚೆಂಡು ಮತ್ತು ಹೊಗೆಯ ಮೋಡವು ಮೇಲೇರುತ್ತಿರುವುದು ಕಂಡುಬಂದಿದೆ. ವಿಮಾನ ಅಪಘಾತದ ನಂತರ, ಘಟನೆಯ ವೀಡಿಯೊ ಕೂಡ ವೈರಲ್ ಆಗಿದೆ.
ಇಲ್ಲಿಯವರೆಗೆ ಯಾವುದೇ ಸಾವುನೋವುಗಳ ಕುರಿತು ವರದಿಯಾಗಿಲ್ಲ.
ವಿಮಾನವು 12 ಮೀಟರ್ (39 ಅಡಿ) ಉದ್ದವಿತ್ತು ಎಂದು ಹೇಳಲಾಗುತ್ತಿದೆ. ಅಪಘಾತಕ್ಕೀಡಾದ ವಿಮಾನ ಬೀಚ್ ಬಿ 200 ಸೂಪರ್‌ಕಿಂಗ್ ಏರ್ ಆಗಿದ್ದು, ಅದು ಲಂಡನ್‌ನ ಸೌತೆಂಡ್ ವಿಮಾನ ನಿಲ್ದಾಣದಿಂದ ನೆದರ್‌ಲ್ಯಾಂಡ್ಸ್‌ನ ಲೆಲಿಸ್ಟಾಡ್‌ಗೆ ಹಾರಾಟ ನಡೆಸುತ್ತಿತ್ತು.
ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾದ ಹೇಳಿಕೆಯಲ್ಲಿ, ವಿಮಾನ ನಿಲ್ದಾಣವು ವಿಮಾನ ಅಪಘಾತವನ್ನು ದೃಢಪಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಚಿತ್ರಗಳು ಅಪಘಾತ ಸ್ಥಳದಿಂದ ಬೆಂಕಿ ಮತ್ತು ಕಪ್ಪು ಹೊಗೆ ಹೊರಬರುತ್ತಿರುವುದನ್ನು ಕಂಡು ಬಂದಿದೆ.
Comments are closed.