Bihar: ಅಪ್ರಾಪ್ತ ಬಾಲಕ-ಬಾಲಕಿ ನಡುವೆ ಲೈಂಗಿಕ ಸಂಪರ್ಕ, ತೀವ್ರ ರಕ್ತಸ್ರಾವದಿಂದ ಬಾಲಕಿ ಸಾವು.!

Share the Article

 

Bihar: ಅಪ್ರಾಪ್ತ ಬಾಲಕ ಮತ್ತು ಬಾಲಕಿ ಇಬ್ಬರು ಸೇರಿ ದಹಿಕ ಸಂಪರ್ಕ ನಡೆಸಿದ್ದು, ಸಂಪರ್ಕದ ಬಳಿಕ ತೀವ್ರ ರಕ್ತಸ್ರಾವದಿಂದ ಬಾಲಕಿ ಮೃತಪಟ್ಟ ಘಟನೆ ಬಿಹಾರದಲ್ಲಿ ನಡೆದಿದೆ.

 

ಬಿಹಾರ ರಾಜಧಾನಿ ಪಾಟ್ನಾದ ಜಕ್ಕನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಅಪ್ರಾಪ್ತಹುಡುಗಿ ಜೆಹಾನಾಬಾದ್ ನಿವಾಸಿಯಾಗಿದ್ದು ಆಕೆ 10 ದಿನಗಳ ಹಿಂದೆ ಮಸೌರ್ಹಿಯ ಹುಡುಗನನ್ನು ಭೇಟಿಯಾಗಿದ್ದಳು. ಆ ಹುಡುಗ ಕೂಡ ಅಪ್ರಾಪ್ತ ವಯಸ್ಕ. ಹುಡುಗ ಹುಡುಗಿಯನ್ನು ತನ್ನ ಸ್ನೇಹಿತನ ಕೋಣೆಗೆ ಕರೆದೊಯ್ದು ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಲೈಂಗಿಕ ಸಂಪರ್ಕದ ಸಮಯದಲ್ಲಿ ಹುಡುಗಿಗೆ ರಕ್ತಸ್ರಾವವಾಗಲು ಪ್ರಾರಂಭಿಸಿತು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಅವಳು ಸಾವನ್ನಪ್ಪಿದಳು.

ಅಂದ ಹಾಗೆ ಬಹಳ ದಿನಗಳ ಬಳಿಕ ಭೇಟಿಯಾದ ಹುಡುಗಿಯನ್ನು ಹುಡುಗನ ತನ್ನ ಸ್ನೇಹಿತನ ಮನೆಗೆ ಕರೆದು ಹೋಗಿದ್ದಾನೆ. ಅಲ್ಲಿ ಅವರಿಬ್ಬರು ಸಂಪರ್ಕ ಬೆಳೆಸಿ ಈ ರೀತಿಯ ಎಡವಟ್ಟು ತಂದುಕೊಂಡಿದ್ದಾರೆ.

ಜಕ್ಕನ್ಪುರದ ಉಸ್ತುವಾರಿ ಎಸ್‌ಎಚ್‌ಒ ಮನೀಶ್ ಕುಮಾರ್ ಹೇಳಿಕೆಯನ್ನು ಸ್ವೀಕರಿಸಿದ ನಂತರ, ಪ್ರಕರಣ ದಾಖಲಿಸಲಾಗುವುದು ಮತ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದು, ಇದೀಗ ಇಬ್ಬರೂ ಹುಡುಗರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Comments are closed.