Audi Car: ಕುಡಿದ ಮತ್ತಿನಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಆಡಿ ಕಾರು, ಚಾಲಕನ ಬಂಧನ

Share the Article

Audi Car: ಕುಡಿದ ಮತ್ತಿನಲ್ಲಿ ಆಡಿ ಕಾರು ಚಾಲಕನೊಬ್ಬ ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಕಾರು ಹರಿಸಿದ ಘಟನೆ ನಡೆದಿದೆ. ದೆಹಲಿಯ ವಸಂತ ವಿಹಾರ್‌ ಪ್ರದೇಶದ ಶಿವ ಕ್ಯಾಂಪ್‌ ಬಳಿ ಕಳೆದ ಬುಧವಾರ (ಜು.9) ತಡರಾತ್ರಿ ನಡೆದಿದೆ. ಈ ಘಟನೆಯಲ್ಲಿ ಓರ್ವ ಬಾಲಕಿ ಸೇರಿ ಐದು ಮಂದಿ ಗಾಯಗೊಂಡಿದ್ದಾರೆ.

ನೈರುತ್ಯ ದೆಹಲಿಯ ವಸಂತ್‌ ವಿಹಾರ್‌ ಪ್ರದೇಶದ ಶಿವಾ ಕ್ಯಾಂಪ್‌ ಬಳಿ ಫುಟ್‌ಪಾತ್‌ನಲ್ಲಿ ಈ ಘಟನೆ ನಡೆದಿದೆ. ಜುಲೈ 9 ರಂದು ಬೆಳಗಿನ ಸಮಯ 1.45 ರ ಸುಮಾರಿಗೆ ಕಾರಿನ ಚಾಲಕ ಉತ್ಸವ್‌ ಶೇಖರ್‌ (40) ಎಂಬಾತ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದಾನೆ. ಈತನ ಬಂಧನವಾಗಿದ್ದು, ಈತ ಕುಡಿದಿದ್ದಾನೆ ಎಂದು ವೈದ್ಯಕೀಯ ವರದಿಗಳು ದೃಢಪಡಿಸಿದೆ.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Comments are closed.