Belagavi: ಉತ್ತರ ಕರ್ನಾಟಕ ಶೈಲಿಯ ಗಾಯಕ ಮಾರುತಿ ಹತ್ಯೆ

Share the Article

Belagavi: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೂದಿಹಾಳ ಸಮೀಪ ಸಿಂಗರ್‌ ಮಾರುತಿಯನ್ನುಕೊಲೆ ಮಾಡಿರುವ ಘಟನೆ ನಡೆದಿದೆ. 5000 ರೂ. ಹಾಗೂ ಕೆಲಸಕ್ಕೆ ಬರದ ಕಾರಣಕ್ಕೆ  ಕೊಲೆ ನಡೆದಿದೆ.

ಉತ್ತರ ಕರ್ನಾಟಕದ ಶೈಲಿಯ ಹಾಡುಗಳ ಮೂಲಕ ಮನೆ ಮಾತಾಗಿರುವ ಮಾರುತಿ ಅವರು ತಮ್ಮ ಸ್ನೇಹಿತರ ಜೊತೆ ಬೈಕ್‌ನಲ್ಲಿ ಬರುವಾಗ ಅವರ ಮೇಲೆ ದಾಳಿ ಮಾಡಲಾಗಿದ್ದು, ಬೈಕ್‌ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರುತಿಯನ್ನು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿ ನಂತರ ಕಾರು ಹತ್ತಿಸಿದ್ದಾರೆ ಎಂದು ವರದಿಯಾಗಿದೆ.

ಆರೋಪಿ ಈರಪ್ಪನ ಬಳಿ ಮಾರು ರೂ.50000 ಸಾಲ ಪಡೆದಿದ್ದು, 45000 ರೂ. ವಾಪಾಸು ನೀಡಿದ್ದ. ಐದು ಸಾವಿರ ರೂ ಬಾಕಿ ವಿಚಾರಕ್ಕೆ ಕೊಲೆ ಮಾಡಲಾಗಿದೆ. ಮಾರುತಿಗೆ ಹಾಡಿನಲ್ಲಿ ಬೇಡಿಕೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಕಬ್ಬು ಕಟಾವು ಕೆಲಸಕ್ಕೆ ಹೋಗದೇ ಹಾಡುವುದರಲ್ಲಿ ಬ್ಯುಸಿಯಾಗಿದ್ದ. ಇತ್ತ ಕೆಲಸಕ್ಕೂ ಹೋಗದೆ, ಹಣ ಕೊಡದ ಕಾರಣ ಹತ್ಯೆ ನಡೆದಿದೆ.

ಮಾರುತಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿಗಳು ಮಾರುತಿಯ ಮೇಲೆ ಕಾರನ್ನು ಹತ್ತಿಸಿದ್ದು, ಈ ಸಂದರ್ಭ ಕಾರು ಪಲ್ಟಿಯಾಗಿ ಆರೋಪಿಗಳು ಗಾಯಗೊಂಡಿದ್ದಾರೆ. ಆರೋಪಿ ಈಶ್ವರಪ್ಪನಿಗೆ ಗೋಕಾಕ ಸರಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಆಕಾಶ್‌ ಪೂಜಾರಿ, ಸಿದ್ದರಾಮ ಒಡೆಯರ್‌ ನನ್ನು ಪೊಲೀಸರು ಬಂಧನ ಮಾಡಿದ್ದು, ಒಟ್ಟು 11 ಜನರ ವಿರುದ್ಧ ಕೇಸು ದಾಖಲಾಗಿದೆ. ರಾಯಭಾಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.