Bangalore: ಮಗಳ ಜೊತೆ ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೋ ಸೆರೆ: ವ್ಯಕ್ತಿ ಬಂಧನ

Banglore: ಎಂಟು ವರ್ಷದ ಮಗಳ ಜೊತೆ ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೋವನ್ನು ಸೆರೆ ಹಿಡಿದಿದ್ದ ಕೇರಳ ಮೂಲದ ಹಾಜ ಮೊಹಿದ್ದಿನ್ (24) ಎಂಬಾತನನ್ನು ಕಾಡುಗೋಡಿ ಪೊಲೀಸರು ಬಂಧನ ಮಾಡಿದ್ದಾರೆ.

ಜುಲೈ 8 ರಂದು ಚನ್ನಸಂದ್ರದ ಮನೆಯೊಂದರ ಬಳಿ ಆರೋಪಿ ಹೋಗಿ ಮೊಬೈಲ್ ಮೂಲಕ ವಿಡಿಯೋ ಮಾಡಿದ್ದರ ಕುರಿತು ದೂರು ದಾಖಲಾಗಿತ್ತು. ಆರೋಪಿ ಎಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದು, ಚನ್ನಸಂದ್ರದಲ್ಲಿ ವಾಸ ಮಾಡುತ್ತಿದ್ದ. ಘಟನೆ ನಡೆದ ಬಳಿಕ ಸಿಸಿ ಕೆಮರಾಗಳ ದೃಶ್ಯವನ್ನು ಆಧರಿಸಿ ಆರೋಪಿಯನ್ನು ಬಂಧನ ಮಾಡಲಾಗಿದೆ. ಆರೋಪಿ ಈ ಹಿಂದೆ ಇದೇ ರೀತಿ ಬೇರೆ ಕಡೆ ಮಾಡಿರುವ ಸಾಧ್ಯತೆಯಿರುವ ಕುರಿತು ವರದಿಯಾಗಿದೆ. ಈತನ ಮೊಬೈಲನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿರುವ ಕುರಿತು ವರದಿಯಾಗಿದೆ.
Comments are closed.