UP: ಪೊದೆಯೊಳಗೆ ನಿಂತಿತ್ತು ಕಾರು- ಜನ ಬರುತ್ತಿದ್ದಂತೆ ಚಡ್ಡಿ ಸರಿ ಮಾಡಿಕೊಳ್ಳುತ್ತಾ ಹೊರ ಬಂದ BJP ನಾಯಕ

UP: ಕೆಲ ತಿಂಗಳ ಹಿಂದೆ ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕರು ನಡು ರಸ್ತೆಯಲ್ಲಿ ಅಸಭ್ಯ ಕೆಲಸದಲ್ಲಿ ತೊಡಗಿದ ಅಶ್ಲೀಲ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಉತ್ತರ ಪ್ರದೇಶದ ಬಿಜೆಪಿ ನಾಯಕನೊಬ್ಬನ ಅಸಹ್ಯಕರ ಕೃತ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲಾಗುತ್ತಿದ್ದು ಬಾರಿ ಆಕ್ರೋಶ ವ್ಯಕ್ತವಾಗಿದೆ.

ಹೌದು, ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಶಿಕಾರ್‌ಪುರ ಕೊತ್ವಾಲಿ ಪ್ರದೇಶದ ಕೈಲವನ್ ಗ್ರಾಮದಲ್ಲಿನ ವಿಡಿಯೋ ಒಂದು ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ವಿವಾಹಿತ ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿರೋದನ್ನು ಕಾಣಬಹುದು.
ಅಂದಹಾಗೆ ಕೈಲವನ್ ಗ್ರಾಮದ ಹೊರವಲಯದ ಸ್ಮಶಾನದ ಬಳಿ ಅನುಮಾನಸ್ಪದ ಕಾರ್ ನಿಂತಿತ್ತು. ಕಾರ್ ನೋಡಿದ ಗ್ರಾಮಸ್ಥರು ಅಲ್ಲಿ ಏನೋ ನಡೆಯುತ್ತಿದೆ ಎಂದು ನೋಡಲು ತೆರಳಿದ್ದಾರೆ. ಈ ವೇಳೆ ಮಹಿಳೆ ಜೊತೆ ಬಿಜೆಪಿಯ ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾ ಸಚಿವ ರಾಹುಲ್ ವಾಲ್ಮೀಕಿ ಆಕ್ಷೇಪಾರ್ಹ ಸ್ಥಿತಿಯಲ್ಲಿರೋದನ್ನು ನೋಡಿ ವಿಡಿಯೋ ಮಾಡಿಕೊಂಡಿದ್ದರು. ಜನರನ್ನು ನೋಡಿ ಗಾಬರಿಯಾದ ರಾಹುಲ್ ವಾಲ್ಮೀಕಿ, ಅವಸರವಾಗಿ ಬಟ್ಟೆ ಧರಿಸಿಕೊಂಡು ಹೊರ ಬಂದು ವಿಡಿಯೋ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಜನರ ಬಳಿ ರಾಹುಲ್ ವಾಲ್ಮೀಕಿ ಕ್ಷಮೆ ಕೇಳುತ್ತಿರೋದನ್ನು ಕಾಣಬಹುದು. ಒಳ ಉಡುಪು ಸರಿ ಮಾಡಿಕೊಳ್ಳುತ್ತಾ ಕಾರಿನಿಂದ ಹೊರ ಬರುವ ವ್ಯಕ್ತಿ, ಅಲ್ಲಿಂದ ಜನರ ಕಾಲುಗಳನ್ನು ಮುಟ್ಟಿ ನಮಸ್ಕರಿಸಲು ಮುಂದಾಗೋದನ್ನು ವಿಡಿಯೋದಲ್ಲಿ ಕಾಣಬಹುದು. ಆ ವ್ಯಕ್ತಿ ಕಾಲಿಗೆ ನಮಸ್ಕರಿ ಕ್ಷಮೆ ಕೇಳುತ್ತಾನೆ. ಕ್ಷಮೆ ಕೇಳುತ್ತಿರುವ ವಿಡಿಯೋದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Comments are closed.