Mailaralingeshwara Karnika: ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಹೇಳಿದ್ದೇನು?

Share the Article

Mailaralingeshwara Karnika: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ ನುಡಿದಿದೆ. ಕರ್ನಾಟಕದಲ್ಲಿ ಭಾರೀ ಚರ್ಚೆಯ ವಿಷಯವೆಂದರೆ ಸಿಎಂ ಬದಲಾವಣೆ ಸುದ್ದಿ. ಇದೀಗ ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ ನುಡಿದಿದ್ದು, ಕಾಂಗ್ರೆಸ್‌ ಶಾಸಕರ ಮನಸ್ಸುಗಳು ಕದಲಿಗೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ ಎಂದು ಹೇಳಿದೆ.

ಡಿಕೆ ಶಿವಕುಮಾರ್‌ಗೆ ಸಿಎಂ ಆಗುವ ಯೋಗ ಇದೆ ಎಂದು ಶ್ರೀ ವೆಂಕಪ್ಪಯ್ಯ ಮೈಲಾರದ ಕಾರ್ಣಿಕ ನುಡಿಯನ್ನು ವಿಶ್ಲೇಷಿಸಿದ್ದಾರೆ. 2025ರ ಪ್ರಸಕ್ತ ವರ್ಷದ ದೈವವಾಣಿ ತುಂಬಿದ ಕೊಡ ತುಳಿಕಿತಲೇ ಪರಾಕ್‌ ಎಂದು ಕಾರ್ಣಿಕ ನುಡಿದಿದೆ.

ರಾಜ್ಯದಲ್ಲಿ ತುಂಬಿದ ಕೊಡಪಾನದಂತೆ ಈಗ ಸರಕಾರ ಇದೆ. ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ತೊಂದರೆ ಇಲ್ಲ. ಮನಸ್ಸು ಕದಲಿದರೇ ಸರಕಾರಕ್ಕೆ ಅಪಾಯವಿದೆ ಎಂದು ಕಾರ್ಣಿಕ ಭವಿಷ್ಯ ನುಡಿದಿದೆ. ಡಿಸಿಎಂ ಡಿ ಕೆ ಶಿವಕುಮಾರ್‌ ಸಿಎಂ ಬದಲಾವಣೆ ಆಗುವುದು ಖಚಿತ ಎಂದು ವೆಂಕಪ್ಪಯ್ಯ ಒಡೆಯರ್‌ ವಿಶ್ಲೇಷಣೆ ಮಾಡಿದ್ದಾರೆ.

Comments are closed.