Plane Crash: ಅಹ್ಮದಾಬಾದ್ ವಿಮಾನ ದುರಂತ ಪ್ರಕರಣಕ್ಕೆ ರೋಚಕ ರೋಚಕ ಟ್ವಿಸ್ಟ್ – ಪ್ರಾಥಮಿಕ ವರದಿಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ

Plane Crash: ದೇಶದ ಭೀಕರ ವಿಮಾನ ದುರಂತಗಳಲ್ಲಿ ಒಂದಾದ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ವಿಮಾನ ದುರಂತಕ್ಕೆ ಕಾರಣವೇನೆಂಬುದು ಬಯಲಾಗಿದೆ.

ಹೌದು, ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯು ಶುಕ್ರವಾರ ರಾತ್ರಿ ಬಿಡುಗಡೆಯಾಗಿದೆ. ಇದರಲ್ಲಿ ವಿಮಾನ ಅಪಘಾತವಾಗಿದ್ದಕ್ಕೆ ಪ್ರಮುಖವಾಗಿ ವಿಮಾನದಲ್ಲಿ ಇಂಧನ ಸ್ವಿಚ್ ಆಫ್ ಆಗಿರುವುದು ಕಾರಣ ಎಂದು ತನಿಖಾ ಸಂಸ್ಥೆ ಹೇಳಿದೆ.
ಅಲ್ಲದೆ ಈಗ ಕಾಕ್ಪಿಟ್ ಧ್ವನಿ ರೆಕಾರ್ಡರ್ನಲ್ಲಿ (CVR) ಕಂಡುಬರುವ ಆಘಾತಕಾರಿ ಸಂಭಾಷಣೆಗಳನ್ನು ವರದಿ ಬಹಿರಂಗಪಡಿಸಿದೆ. ಈ ವರದಿಯಲ್ಲಿ ದಾಖಲಾಗಿರುವ ಕಾಕ್ಪಿಟ್ ಸಂಭಾಷಣೆಯ ಪ್ರಕಾರ, ಹಾರಾಟದ ಸ್ವಲ್ಪ ಸಮಯದ ನಂತರ, ಎರಡೂ ಎಂಜಿನ್ಗಳಲ್ಲಿ ಹಠಾತ್ ಇಂಧನ ಕಡಿತವಾಯಿತು. ನಂತರ ಒಬ್ಬ ಪೈಲಟ್ ಇನ್ನೊಬ್ಬರನ್ನು “ನೀವು ಇಂಧನವನ್ನು ಏಕೆ ಕಡಿತಗೊಳಿಸಿದ್ದೀರಿ?” ಎಂದು ಕೇಳಿದರು, ಇನ್ನೊಬ್ಬ ಪೈಲಟ್, “ನಾನು ಹಾಗೆ ಮಾಡಲಿಲ್ಲ” ಎಂದು ಉತ್ತರಿಸಿದ್ದಾರೆ.
ಇನ್ನು ವಿಮಾನವು ಟೇಕ್ ಆಫ್ ಆದ ತಕ್ಷಣ ಗರಿಷ್ಠ 180 ಗಂಟೆಗಳ ವೇಗವನ್ನು ತಲುಪಿತು. ಅದೇ ಸಮಯದಲ್ಲಿ, ಎರಡೂ ಎಂಜಿನ್ಗಳ ಇಂಧನ ಕಡಿತ ಸ್ವಿಚ್ಗಳು 1 ಸೆಕೆಂಡ್ ವ್ಯತ್ಯಾಸದೊಂದಿಗೆ “RUN” ನಿಂದ “CUTOFF” ಗೆ ಪರಿವರ್ತನೆಗೊಂಡವು. ತಕ್ಷಣ ಎಂಜಿನ್ 1 ರ ಇಂಧನ ಸ್ವಿಚ್ ಅನ್ನು RUN ಗೆ ಹಿಂತಿರುಗಿಸಲಾಯಿತು. ಎಂಜಿನ್ 2 ರ ಸ್ವಿಚ್ ಅನ್ನು ಸಹ RUN ನಲ್ಲಿ ಇರಿಸಲಾಯಿತು. ಇದಾದ ಸ್ವಲ್ಪ ಸಮಯದ ನಂತರ, ವಿಮಾನ ಅಪಘಾತಕ್ಕೀಡಾಯಿತು. ಎರಡೂ ಎಂಜಿನ್ಗಳನ್ನು ಮರುಪ್ರಾರಂಭಿಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ, ಆದರೆ ಸಮಯ ಮತ್ತು ಎತ್ತರದ ಕೊರತೆಯಿಂದಾಗಿ, ಎರಡೂ ಎಂಜಿನ್ಗಳನ್ನು ಮರುಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಯುಗಾದಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಘಟನೆ ಹಿನ್ನೆಲೆ:
ಜೂನ್ 12ರಂದು ಮಧ್ಯಾಹ್ನ 1:39ರ ವೇಳೆಗೆ ಅಹಮದಾಬಾದ್ನಿಂದ ಲಂಡನ್ ಗ್ಯಾತ್ವಿಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನವು ಟೇಕಾಫ್ ಆದ 35 ಸೆಕೆಂಡುಗಳಲ್ಲಿ ವಿಮಾನ ನಿಲ್ದಾಣದ ಸಮೀಪವಿರುವ ಬಿ.ಜೆ. ಮೆಡಿಕಲ್ ಆಸ್ಪತ್ರೆಯ ಹಾಸ್ಟೆಲ್ ಮೇಲೆ ಪತನವಾಯಿತು. ಈ ವೇಳೆ ವಿಮಾನದಲ್ಲಿದ್ದ 241 ಜನರ ಪೈಕಿ 240 ಜನರು ಸಜೀವ ದಹನರಾದರು. ಇದೇ ವೇಳೆ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರೂ ಸಹ ಅಸುನೀಗಿದ್ದರು. ಪವಾಡಸದೃಶವಾಗಿ ವಿಶ್ವಾಸ್ ರಮೇಶ್ ಎಂಬ ಬ್ರಿಟೀಶ್ ಪ್ರಜೆ ಬಚಾವ್ ಆಗಿದ್ದರು. ದುರದೃಷ್ಟವಶಾತ್ ಹಾಸ್ಟೆಲ್ ಮತ್ತು ಸುತ್ತಮುತ್ತ ಇದ್ದವರ ಪೈಕಿ 20 ಜನರು ಅಸುನೀಗಿದ್ದರು.
Comments are closed.