Ayodhya: ಬ್ರಾಹ್ಮಣ ಹುಡುಗಿಗೆ 16 ಲಕ್ಷ, ಇತರರಿಗೆ 12 ಲಕ್ಷ – ಸಾವಿರಕ್ಕೂ ಹೆಚ್ಚು ಹುಡುಗಿಯರ ಮತಾಂತರ ಮಾಡಿ ನೂರಾರು ಕೋಟಿ ಒಡೆಯನಾದ ತಾಯ್ತ ಮಾರ್ತಿದ್ದ ಬಾಬಾ

Ayodhya: ಹಿಂದೂ ಹುಡುಗಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಛಂಗುರ್ ಬಾಬಾ (Chhangur Baba) ಅಯೋಧ್ಯೆಯಲ್ಲಿ (Ayodhya) ಅತಿ ಹೆಚ್ಚು ಖರ್ಚು ಮಾಡಿರುವುದು ಜೊತೆಗೆ ಅದರಿಂದ ಕೋಟಿ ಕೋಟಿ ಸಂಪಾದಿಸಿರುವುದು ತನಿಖೆ ವೇಳೆ ಬಹಿರಂಗವಾಗಿದೆ.
ಹೌದು, ಸೈಕಲ್ನಲ್ಲಿ ತಾಯತ ಮಾರುತ್ತಿದ್ದ ಈ ಖತರ್ನಾಕ್ ಬಾಬಾನ ಒಂದೊಂದೇ ಭಯಾನಕ ಕೃತ್ಯಗಳು ಆತ ಅರೆಸ್ಟ್ ಆದ ಬಳಿಕ ಬೆಳಕಿಗೆ ಬರುತ್ತಿದೆ. ಮೊನ್ನೆ ಈತನನ್ನು ಬಂಧಿಸಲಾಗಿದ್ದು, ಅವರು ನೂರಾರು ಕೋಟಿ ರೂಪಾಯಿಗಳ ಒಡೆಯನಾಗಿದ್ದು, ಐಷಾರಾಮಿ ಬಂಗಲೆ ಸೇರಿದಂತೆ ಐಷಾರಾಮಿ ಜೀವನ ನಡೆಸುತ್ತಿರುವುದು ತಿಳಿದುಬಂದಿದೆ. ಇಷ್ಟೇ ಅಲ್ಲದೆ ಈತನ ಮಗ ಸ್ವಿಸ್ ಬ್ಯಾಂಕ್ ನಲ್ಲಿ ಅಕೌಂಟನ್ನು ಕೂಡ ಹೊಂದಿದ್ದಾನೆ. ಅಷ್ಟಕ್ಕೂ ಈತ ಇಷ್ಟೆಲ್ಲ ಹಣ ಸಂಪಾದಿಸಿದ್ದು ಹಿಂದೂ ಹುಡುಗಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿ. ಇದಾಗಲೇ ಒಂದೂವರೆ ಸಾವಿರಕ್ಕೂ ಅಧಿಕ ಹಿಂದೂ ಮಹಿಳೆಯರು ಈತನ ಮೋಸದ ಜಾಲಕ್ಕೆ ಬಿದ್ದು ಮತಾಂತರಗೊಂಡಿರುವುದಾಗಿ ಹೇಳಲಾಗುತ್ತಿದೆ.
ಆಶ್ಚರ್ಯದ ಸಂಗತಿ ಏನೆಂದರೆ ಉತ್ತರ ಪ್ರದೇಶದ ಈ ಆಸಾಮಿ, ಒಂದೊಂದು ಜಾತಿಯ ಹುಡುಗಿಯನ್ನು ಮತಾಂತರ ಮಾಡಲು ರೇಟ್ ಫಿಕ್ಸ್ ಮಾಡಿದ್ದ. ಒಬ್ಬ ಬ್ರಾಹ್ಮಣ, ಸಿಖ್ ಅಥವಾ ಕ್ಷತ್ರಿಯ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಿದರೆ ಅಂಥವರಿಗೆ 16 ಲಕ್ಷ ರೂಪಾಯಿ ಸಿಗುತ್ತಿತ್ತು. ಇತರೇ ಹಿಂದುಳಿದ ವರ್ಗದವರಾದರೆ 10 ರಿಂದ 12 ಲಕ್ಷ ಹಾಗೂ ಉಳಿದವರಿಗೆ 8 ರಿಂದ 10 ಲಕ್ಷ ರೂಪಾಯಿ ನಿಗದಿ ಮಾಡಿದ್ದ.
ಹೀಗೆ ಮಾಡಲು ಅವನಿಗೆ ವಿದೇಶಿ ನೆರವು ಸಿಗುತ್ತಿತ್ತು. 40 ಬ್ಯಾಂಕ್ ಅಕೌಂಟ್ಗಳಲ್ಲಿ ಈತನಿಗೆ ಹಣದ ಹೊಳೆಯೇ ಹರಿದು ಬರುತ್ತಿತ್ತು. ಅದನ್ನು ಬಳಸಿಕೊಂಡು ತನ್ನ ಶಿಷ್ಯರನ್ನು ಮತಾಂತರಕ್ಕೆ ಬಿಡುತ್ತಿದ್ದ. ಹೆಣ್ಣುಮಕ್ಕಳಿಗೆ ಬ್ರೇನ್ವಾಷ್ ಮಾಡಿಸಿ, ಅವರನ್ನು ಮತಾಂತರಗೊಳಿಸಿದರೆ ಅವರಿಗೆ ಇಷ್ಟು ಬೃಹತ್ ಮೊತ್ತದ ಹಣ ನೀಡಲಾಗುತ್ತಿತ್ತು. ಐಷಾರಾಮಿ ಬೈಕ್, ಕಾರುಗಳಲ್ಲಿ ಚಿತ್ರ ವಿಚಿತ್ರ ಹೇರ್ಸ್ಟೈಲ್ ಮಾಡಿಕೊಂಡು ಬರುವ ಸುಂದರ ಹುಡುಗರನ್ನು ನೋಡಿ ಮರಳಾಗುವ ಹಿಂದೂ ಹುಡುಗಿಯರಿಗೇನೂ ಕಮ್ಮಿ ಇಲ್ಲ. ಒಟ್ಟಿನಲ್ಲಿ ದುಡ್ಡಿದ್ದವನ ಜೊತೆ ಮೋಜು ಮಾಡುವ ಆಸೆಯಿಂದ ಬಲಿಯಾಗುವ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ (ಈಗಲೂ ಮಾಡುತ್ತಿರುವ) ಖದೀಮರಿಗೆ ಈತನೇ ನಾಯಕ!
ಒಟ್ಟಿನಲ್ಲಿ ಧಾರ್ಮಿಕ ಮತಾಂತರದ (Religious Conversion) ಮಾಸ್ಟರ್‌ಮೈಂಡ್ ಬಾಬಾನಿಗೆ ಮುಸ್ಲಿಂ ರಾಷ್ಟ್ರಗಳಿಂದ ಮತಾಂತರಕ್ಕಾಗಿ 500 ಕೋಟಿ ರೂ. ಹಣ ಬರುತ್ತಿತ್ತು. 200 ಕೋಟಿ ರೂ. ಅಧಿಕೃತವಾಗಿ ಬಂದಿದೆ. ಬಾಕಿ 300 ಕೋಟಿ ಹಣ ಅಕ್ರಮ ಹವಾಲಾ ಮೂಲಕ ಬಂದಿದೆ. ಇದರಲ್ಲಿ 200 ಕೋಟಿ ರೂ.ಗಳನ್ನು ಅಧಿಕೃತವಾಗಿ ಮೌಲ್ಯೀಕರಿಸಲಾಗಿದೆ. ಆದರೆ 300 ಕೋಟಿ ರೂ. ಅಕ್ರಮ ಹವಾಲಾ ಮಾರ್ಗಗಳನ್ನು ಬಳಸಿಕೊಂಡು ನೇಪಾಳದ ಮೂಲಕ ರವಾನಿಸಲಾಗಿದೆ.
ಭಯೋತ್ಪಾದನಾ ನಿಗ್ರಹ ದಳವು 10 ವರ್ಷಗಳ ಆದಾಯ ತೆರಿಗೆ ದಾಖಲೆಗಳನ್ನು ಸಹ ಕೇಳಿದೆ. ತನಿಖಾಧಿಕಾರಿಗಳು ನವೀನ್ ರೋಹ್ರಾ ಎಂಬಾತನ ಆರು ಖಾತೆಗಳಲ್ಲಿ 34.22 ಕೋಟಿ ರೂ. ಮತ್ತು ನಸ್ರೀನ್ ಎಂಬ ಮಹಿಳೆಯ ಖಾತೆಗಳಲ್ಲಿ 13.90 ಕೋಟಿ ರೂ.ಗಳನ್ನು ಪತ್ತೆಹಚ್ಚಿದ್ದಾರೆ. ಶಾರ್ಜಾ, ದುಬೈ ಅಥವಾ ಯುಎಇಯಲ್ಲಿರುವ ಛಂಗೂರ್‌ನ ಶಂಕಿತ ವಿದೇಶಿ ಬ್ಯಾಂಕ್ ಖಾತೆಗಳನ್ನು ಇನ್ನೂ ಪರಿಶೀಲಿಸುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಹುಡುಗಿಯರನ್ನು ಹೇಗೆ ಬಲೆಗೆ ಬೀಳಿಸಲಾಗುತ್ತಿತ್ತು?
ಸೋಷಿಯಲ್ ಮೀಡಿಯಾ, ಡೇಟಿಂಗ್ ಆಯಪ್‌ಗಳ ಮೂಲಕ 15-24 ವಯಸ್ಸಿನ ಕೆಳ ಮಧ್ಯಮ ವರ್ಗದ ಹಿಂದೂ ಹೆಣ್ಣುಮಕ್ಕಳ ಜತೆ ಪ್ರೀತಿ, ಮದುವೆ ಅಥವಾ ಉದ್ಯೋಗ ಭರವಸೆ ನೀಡಿ ಸಂಪರ್ಕ ಮಾಡಲಾಗುತ್ತದೆ. ಕೊನೆಗೆ ಹಿಂದೂ ಧರ್ಮದ, ಹಿಂದೂ ದೇವತೆಗಳ ವಿರುದ್ಧ ಬ್ರೇನ್ವಾಷ್ ಮಾಡಿ, ಇಸ್ಲಾಂ ಬೋಧನೆಗಳ ವಿಡಿಯೋಗಳನ್ನು ಕಳಿಸಿ, ಅದೇ ಶ್ರೇಷ್ಠ ಎನ್ನುವಮತೆ ಮಾಡಲಾಗುತ್ತದೆ. ಬುದ್ಧಿಹೀನ ಹೆಣ್ಣುಮಕ್ಕಳು ಸುಲಭದಲ್ಲಿ ಇದಕ್ಕೆ ಟಾರ್ಗೆಟ್ ಆಗುತ್ತಾರೆ. ಒಮ್ಮೆ ಅವರ ಜಾಲಕ್ಕೆ ಬಿದ್ದ ಮೇಲೆ ಮುಂದೆ ಸಾಯಲೂ ಆಗದೇ, ಬದುಕಲೂ ಆಗದೇ ಕ್ಷಣ ಕ್ಷಣವೂ ವಿಲವಿಲ ಒದ್ದಾಡುವ ಸ್ಥಿತಿ ಅವರದ್ದು.
ಹೀಗೆ ಹೆಣ್ಣುಮಕ್ಕಳು ಜಾಲಕ್ಕೆ ಬೀಳುತ್ತಿದ್ದಂತೆಯೇ, ಇದಕ್ಕಾಗಿಯೇ ಇರುವ ಕೆಲವು ಧಾರ್ಮಿಕ ಸಂಸ್ಥೆಗಳಿಗೆ ಕರೆದೊಯ್ದು ಅಧಿಕೃತವಾಗಿ ಮತಾಂತರಿಸಲಾಗುತ್ತದೆ. ಬಳಿಕ, ಹಿಂದೂ ಹೆಸರಿಟ್ಟುಕೊಂಡ ಮುಸ್ಲಿಂ ಹುಡುಗರ ಜತೆ ಮದುವೆ ಮಾಡಿಸಲಾಗುತ್ತದೆ. 16ರಿಂದ 22 ವರ್ಷದ ಹುಡುಗರಿಗೆ ಇದರ ತರಬೇತಿ ನೀಡಲಾಗಿರುತ್ತದೆ.
Comments are closed.