Shivamogga: ವಿಟಮಿನ್‌ ಎ ಡ್ರಾಪ್ಸ್‌ ಹಾಕಿದ್ದ ಅಂಗನವಾಡಿಯ 13 ಮಕ್ಕಳು ಅಸ್ವಸ್ಥ

Share the Article

Shivamogga: ಶಿವಮೊಗ್ಗ ಜಿಲ್ಲೆ ರಿಪ್ಪನ್‌ ಪೇಟೆ ಸಮೀಪದ ಹಿರೇಸಾನಿ ಅಂಗನವಾಡಿಯಲ್ಲಿರುವ 13 ಮಕ್ಕಳಿಗೆ ಮಂಗಳವಾರ ಸಂಜೆಯಿಂದ ವಾಂತಿ ಭೇದಿ ಶುರುವಾಗಿರುವ ಘಟನೆ ನಡೆದಿರುವ ಕುರಿತು ವರದಿಯಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಮಕ್ಕಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕೆಲವು ಮಕ್ಕಳನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಂಗನವಾಡಿಯಲ್ಲಿ ಮಂಗಳವಾರ ಮಕ್ಕಳಿಗೆ ವಿಟಮಿನ್‌ ಎ ಡ್ರಾಪ್ಸ್‌ ಹಾಕಲಾಗಿತ್ತು. ಅಂದು ಸಂಜೆ ಮನೆಗೆ ಬಂದ ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದೆ. ನಂತರ ವಾಂತಿ ಭೇದಿ ಶುರುವಾಗಿದೆ. ತಕ್ಷಣ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ.

ಪೋಷಕರು ಅಂಗನವಾಡಿಯಲ್ಲಿ ನೀಡಿದ ಡ್ರಾಪ್ಸ್‌ನಿಂದ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮಾಹಿತಿ ತಿಳಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಯಶೀಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಭಾರತೀ ಬಣಕಾರ, ಇಲಾಖೆಯ ಅಧಿಕಾರಿ ಗಾಯತ್ರಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಹಿರೇಸಾನಿ ಮತ್ತು ಮಸ್ಕಾನಿಯ ಅಂಗನವಾಡಿ ಮಕ್ಕಳಿಗೆ ವಿಟಮಿನ್‌ ಎ ಡ್ರಾಪ್ಸ್‌ ನೀಡಲಾಗಿದೆ. ಹಿರೇಸಾನಿ ಮಕ್ಕಳಲ್ಲಿ ಮಾತ್ರ ಅನಾರೋಗ್ಯ ಕಂಡು ಬಂದಿದೆ. ಮಕ್ಕಳಿಗೆ ನೀಡುತ್ತಿದ್ದ ನೀರಿನ ಮಾದರಿಯನ್ನು ಸಂಗ್ರಹ ಮಾಡಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Health Insurance: ಇನ್ನು ನೀವು 2 ಗಂಟೆಗಳ ಆಸ್ಪತ್ರೆಗೆ ದಾಖಲಾದರೂ ಕ್ಲೈಮ್ ಪಡೆಯಲು ಅರ್ಹರು: ಈ ಕಂಪನಿಗಳು ವಿಮಾ ರಕ್ಷಣೆ ನೀಡುತ್ತೆ

Comments are closed.