Ullala: ಮಂಗಳೂರಿನ ಟೈಲರಿಂಗ್‌ ಶಾಪಿನಲ್ಲೇ ಕುಸಿದು ಬಿದ್ದ ನವವಿವಾಹಿತ: ಚಿಕಿತ್ಸೆ ಫಲಿಸದೇ ಟೈಲರ್‌ ಸಾವು

Share the Article

Ullala: ತಾನು ಕೆಲಸ ಮಾಡುತ್ತಿದ್ದ ಟೈಲರಿಂಗ್‌ ಶಾಪ್‌ನಲ್ಲಿಯೇ ಕುಸಿದು ಬಿದ್ದ ಮಂಜನಾಡಿ ಗ್ರಾಮದ ನವ ವಿವಾಹಿತನೊಬ್ಬ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿರುವ ಘಟನೆ ನಡೆದಿದೆ.

ಉಳ್ಳಾಲ ತಾಲೂಕಿನ ಮಂಜನಾಡಿ ಪೆರಡೆಯ ದಿ.ವೆಂಕಪ್ಪ ಹಾಗೂ ಪಾರ್ವತಿ ದಂಪತಿಯ ಪುತ್ರ ಭರತ್‌ (32) ಸಾವಿಗೀಡಾದ ಯುವಕ. ಮಂಗಳೂರು ನಗರದ ಫಾರಮ್‌ ಮಾಲ್‌ನಲ್ಲಿ ಟೈಲರ್‌ ವೃತ್ತಿ ಮಾಡುತ್ತಿದ್ದ ಭರತ್‌ ನಾಲ್ಕು ದಿನದ ಹಿಂದೆ ಆಘಾತಕಾರಿ ಸುದ್ದಿಯನ್ನು ಕೇಳಿ ಟೈಲರ್‌ ಶಾಪಿನಲ್ಲಿ ಕುಸಿದು ಬಿದ್ದಿದ್ದರು ಎಂದು ವರದಿಯಾಗಿದೆ. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ.

ಕಳೆದ ಎಪ್ರಿಲ್‌ ತಿಂಗಳ 22 ರಂದು ಭರತ್‌ ಅವರ ವಿವಾಹ ನಡೆದಿದೆ. ಪತ್ನಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿ.

Comments are closed.