Maharashtra: ಶಾಲಾ ಶೌಚಾಲಯದಲ್ಲಿ ರಕ್ತ: ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಮುಖ್ಯೋಪಾಧ್ಯಾಯರು

Share the Article

Maharashtra: ಮುಖ್ಯೋಪಾಧ್ಯಾಯರೊಬ್ಬರು ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆ ಕಂಡಿದ್ದಕ್ಕೆ ಯಾರು ಮುಟ್ಟಾಗಿದ್ದರೆಂದು ತಿಳಿಯಲು ಎಲ್ಲಾ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿರುವ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

ಈ ಘಟನೆ ಕುರಿತು ಮುಖ್ಯೋಪಾಧ್ಯಾಯರು ಹಾಗೂ ಓರ್ವ ಸಹಾಯಕ ಸಿಬ್ಬಂದಿಯನ್ನು ಬಂಧನವಾಗಿದೆ. ಈ ಘಟನೆಗೆ ನಿಜಕ್ಕೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಾಂಶುಪಾಲರು ಐದರಿಂದ 10ನೇ ತರಗತಿಯ ಹಲವು ವಿದ್ಯಾರ್ಥಿನಿಯರನ್ನು ಮಂಗಳವಾರ ಶಾಲಾ ಸಭಾಂಗಣಕ್ಕೆ ಕರೆದು ತಂದಿದ್ದಾರೆ. ಸ್ನಾನಗೃಹದಲ್ಲಿ ರಕ್ತದ ಕಲೆ ಕಂಡು ಬಂದಿರುವ ಕುರಿತು ಪ್ರಶ್ನೆ ಮಾಡಿದ್ದಾರೆ ಎಂದು ಸಿಬ್ಬಂದಿ ಹೇಳಿದ್ದಾರೆ. ನಂತರ ಮುಟ್ಟಾದ ವಿದ್ಯಾರ್ಥಿಗಳು, ಮುಟ್ಟಾಗದವರು ಹೀಗೆ ಎರಡು ಗುಂಪಾಗಿ ವಿದ್ಯಾರ್ಥಿಗಳಾಗಿ ವಿಂಗಡನೆ ಮಾಡಿಸಿದ್ದಾರೆ.

10 ರಿಂದ 12 ವರ್ಷದೊಳಗಿನ ಕೆಲವು ಹುಡುಗಿಯರನ್ನು ಪರೀಕ್ಷೆ ಮಾಡಲು ಒಬ್ಬ ಮಹಿಳಾ ಫ್ಯೂನ್‌ ಬಳಿ ಹೇಳಲಾಗಿತ್ತು. ಪ್ಯಾಡ್‌ ಹಾಕಿದ ವಿದ್ಯಾರ್ಥಿನಿ ತಾನು ಮುಟ್ಟಾಗಿಲ್ಲ ಎಂದು ಹೇಳಿದ್ದರು. ಈ ವಿದ್ಯಾರ್ಥಿಯನ್ನು ಇತರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮುಂದೆ ಅವಮಾನ ಮಾಡಿದ್ದಾರೆ.

ಈ ಘಟನೆಗೆ ಸಂಬಂಧಪಟ್ಟಂತೆ ಶಾಲಾ ಪ್ರಾಂಶುಪಾಲರು, ಓರ್ವ ಪಿಯೋನ್‌, ಇಬ್ಬರು ಶಿಕ್ಷಕರು, ಇಬ್ಬರು ಟ್ರಸ್ಟಿಗಳು ಸೇರಿ ಆರು ಜನರ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಮುಖ್ಯೋಪಾಧ್ಯಾಯರು, ಒಬ್ಬ ಫ್ಯೂನ್‌ನ ಬಂಧನ ಮಾಡಲಾಗಿದ್ದು, ಉಳಿದ ನಾಲ್ವರ ವಿರುದ್ಧ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

Comments are closed.