Earthquake: ದೆಹಲಿ-ಎನ್‌ಸಿಆರ್, ಯುಪಿಯಿಂದ ಹರಿಯಾಣದವರೆಗೆ ಭೂ ಕಂಪನದ ಅನುಭವ, ತೀವ್ರತೆ ಎಷ್ಟಿತ್ತು ಗೊತ್ತಾ?

Earthquake: ಇಂದು (ಜುಲೈ 10, 2025) ಬೆಳಿಗ್ಗೆ ದೆಹಲಿ-ಎನ್‌ಸಿಆರ್, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದು ಹರಿಯಾಣದ ಜಜ್ಜರ್ ಜಿಲ್ಲೆಯಲ್ಲಿತ್ತು ಮತ್ತು ಅದರ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.4 ರಷ್ಟು ದಾಖಲಾಗಿದೆ. ಭೂಕಂಪದ ಅನುಭವದಿಂದ ಜನರು ಭಯಭೀತರಾಗಿ ತಮ್ಮ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಬಂದಿದ್ದಾರೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಪ್ರಕಾರ, ಜುಲೈ 10, 2025 ರಂದು ಬೆಳಿಗ್ಗೆ 9:04 ಕ್ಕೆ ಭೂಕಂಪ ಸಂಭವಿಸಿದ್ದು, ಇದರ ಆಳ 10 ಕಿಲೋಮೀಟರ್ ಎಂದು ಹೇಳಲಾಗುತ್ತದೆ.
ಹರಿಯಾಣದ ಸೋನಿಪತ್‌ನಲ್ಲೂ ಭೂಕಂಪನದ ಅನುಭವವಾಗಿದೆ. ಸ್ಥಳೀಯ ಜನರ ಪ್ರಕಾರ, ಬೆಳಿಗ್ಗೆ 9:05 ಕ್ಕೆ ಕೆಲವು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಇದಲ್ಲದೆ, ಉತ್ತರ ಪ್ರದೇಶದ ಮೀರತ್ ಮತ್ತು ಹಾಪುರ್‌ನಲ್ಲಿಯೂ ಭೂಕಂಪನದ ಅನುಭವವಾಗಿದೆ. ದೆಹಲಿ NCR ನಲ್ಲಿ ಕಾಲಕಾಲಕ್ಕೆ ಭೂಕಂಪಗಳು ಅನುಭವಕ್ಕೆ ಬಂದಿದೆ.
Comments are closed.