8th pay Commission: ಸರಕಾರಿ ಉದ್ಯೋಗಿ-ಪಿಂಚಣಿದಾರರಿಗೆ ಸಿಹಿ ಸುದ್ದಿ

8th pay Commission: ಸರಕಾರಿ ಉದ್ಯೋಗಿಗಳು, ಪಿಂಚಣಿದಾರರಿಗೆ ಸರಕಾರ ಸಿಹಿ ಸುದ್ದಿಯನ್ನು ನೀಡಿದೆ. 8ನೇ ವೇತನ ಆಯೋಗ ಜಾರಿಯಾಗುತ್ತಿದೆ ಎಂದು ವರದಿಯಾಗಿದೆ. ಈ ವರ್ಷದ ಮೊದಲಿಗೆ ಅಂದರೆ ಜನವರಿಯಲ್ಲಿ ಸರಕಾರ 8ನೇ ವೇತನ ಆಯೋಗ ಶಿಫಾರಸು ಜಾರಿ ಮಾಡುವುದಾಗಿ ಹೇಳಿತ್ತು. ಇದೀಗ ಆಯೋಗ 8ನೇ ವೇತನ ಶಿಫಾರಸ್ಸನ್ನು ಜಾರಿಗೊಳಿಸಲು ಅನುಮೋದನೆ ನೀಡಿದರೆ, 2026ರ ಜನವರಿಯಿಂದ 8ನೇ ವೇತನ ಆಯೋಗ ಅನ್ವಯವಾಗಲಿದೆ. ವರದಿ ಪ್ರಕಾರ ವೇತನ ಹಾಗೂ ಪಿಂಚಣಿ ಶೇ.30 ರಿಂದ 34 ರಷ್ಟು ಹೆಚ್ಚಳವಾಗಲಿದೆ ಎಂದು ಅಂಬಿಟ್ ಕ್ಯಾಪಿಟಲ್ ವರದಿ ಮಾಡಿದೆ.

ಪ್ರತಿ ವೇತನ ಆಯೋಗ ಕಮಿಷನ್ 10 ವರ್ಷಕ್ಕೆ ಪರಿಷ್ಕರಿಸಲಾಗುತ್ತದೆ. ಪ್ರತಿ ವರ್ಷಕ್ಕೆ ವೇತನ ಆಯೋಗ ಪರಿಷ್ಕರಣೆಯಾಗುತ್ತದೆ. 7ನೇ ಕಮಿಷನ್ ನೀತಿಗಳು ಬದಲಾಗಿ 8ನೇ ವೇತನ ಆಯೋಗದ ನೀತಿಗಳು ಜಾರಿಯಾಗಲಿದ್ದು, ಇದರಿಂದ 4.4.ಮಿಲಿಯನ್ ಸರಕಾರಿ ಉದ್ಯೋಗಿಗಳಿಗೆ ಹಾಗೂ 6.8 ಮಿಲಿಯನ್ ಪಿಂಚಣಿದಾರರಿಗೆ ಉಪಯೋಗವಾಗಲಿದೆ.
Comments are closed.