Madhu Bangarappa : ಯಾವ ದೇವಸ್ಥಾನಕ್ಕೂ ನಾನು ಹಣ ಕೊಡಲ್ಲ, ಅಲ್ಲಿ ಹೋಗಿ ಗಂಟೆ ಹೊಡೆಯಲ್ಲ – ಶಿಕ್ಷಣ ಸಚಿವ ಮಧು ಬಂಗಾರಪ್ಪ

Madhu Bangarappa : ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹಿಂದುತ್ವ.. ಹಿಂದುತ್ವ ಎಂದು ಮಾತನಾಡುತ್ತಾರಲ್ಲ, ಅವರಿಗೆ ಏನು ಗೊತ್ತು ಬದನೆಕಾಯಿ. ಹಿಂದುತ್ವ ಎನ್ನುವವರು ಬಾಯಿ ಮುಚ್ಚಿಕೊಂಡು ಇರಲಿ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಗ್ರಾಮದಲ್ಲಿ ಬಾಲಕಿಯರ ಪ್ರೌಢಶಾಲೆಯನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದ ಅವರು, ಬಿಜೆಪಿ ಅವರು ಹಿಂದುತ್ವ, ಹಿಂದುತ್ವ ಎಂದು ಮಾತನಾಡುತ್ತಾರೆ. ಅವರಿಗೇನು ಗೊತ್ತು ಹಿಂದುತ್ವದ ಬದನೆಕಾಯಿ. ಹಿಂದುತ್ವ ಅವರಿಗೇನು ಗೊತ್ತು. ಹಿಂದೆ ಬಂಗಾರಪ್ಪ ಅವರು ಹಳ್ಳಿಗಳಲ್ಲಿ ದೇವಸ್ಥಾನಕ್ಕೆ ಆರ್ಥಿಕ ಬಲಕ್ಕಾಗಿ ಆರಾಧನಾ ಯೋಜನೆ ತಂದಿದ್ದರು. ಈಗ ಅಜೀಂ ಪ್ರೇಮಜಿ ಅವರು ಶಿಕ್ಷಣ ಕ್ಷೇತ್ರಕ್ಕೆ ಹಣ ನೀಡಿದ್ದಾರೆ. ಅವರು ಯಾರೂ ಜಾತಿ ಮಾಡಿಲ್ಲ. ಎಲ್ಲ ಮಕ್ಕಳಿಗೂ ತತ್ತಿ, ಬಾಳೆಹಣ್ಣು ಕೊಡಲು ಒಪ್ಪಿ ಹಣ ಕೊಟ್ಟಿದ್ದಾರೆ. ಗ್ಯಾರಂಟಿಯಿಂದ ಪುರುಷರಿಗೆ ಯಾವುದೇ ಬೇಸರ ಇಲ್ಲ. ಅವರು ಬೇಸರ ಮಾಡಿಕೊಂಡಿಲ್ಲ ಎಂದರು.
ಅಲ್ಲದೆ ನನ್ನ ಕ್ಷೇತ್ರದಲ್ಲಿ ಜನರು ದೇವಸ್ಥಾನಕ್ಕೆ ಹಣ ಕೇಳಲು ಬರುತ್ತಾರೆ. ನಾನು ಯಾವುದೇ ದೇವಸ್ಥಾನಕ್ಕೆ ಹಣ ಕೊಡುವುದಿಲ್ಲ. ದೇವಸ್ಥಾನದ ಗಂಟೆ ಹೊಡೆದರೆ ಏನಾಗುತ್ತೋ ಗೊತ್ತಿಲ್ಲ. ಆದರೆ ಅದಕ್ಕಿಂತ ಹೆಚ್ಚು ಶಾಲೆಯ ಗಂಟೆ ಹೊಡೆಯಬೇಕು ಎಂದು ಹೇಳಿದ್ದಾರೆ.
Comments are closed.