Bangalore: ಶಾಪಿಂಗ್ ವಿಷಯಕ್ಕೆ ಗಲಾಟೆ: ಪತ್ನಿ ಕುತ್ತಿಗೆಗೆ ಕಾಲಿನಿಂದ ತುಳಿದು ಕೊಲೆ ಮಾಡಿದ ಗಂಡ

Bangalore: ಗಂಡ ಹೆಂಡತಿ ಜಗಳವು ಕೊಲೆಯಲ್ಲಿ ಅಂತ್ಯಗೊಂಡಿದೆ. ಪತ್ನಿ ಶಾಪಿಂಗ್ ಹೋಗಿದ್ದಕ್ಕೆ ಆಕೆಯ ಕುತ್ತಿಗೆಗೆ ಕಾಲಿನಿಂದ ತುಳಿದು ಪತಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಶ್ರೀನಿವಾಸಪುರ ಮೂಲದ ಪದ್ಮಜಾ (29) ಕೊಲೆಯಾದ ಪತ್ನಿ. ಪತಿ ಹರೀಶ್ ಕೊಲೆ ಮಾಡಿದ ಆರೋಪಿ ಗಂಡ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ದಂಪತಿ ಕೆಲಸ ಮಾಡ್ತಿದ್ದರು. ಹರೀಶ್ ಇತ್ತೀಚೆಗೆ ಕೆಲಸಕ್ಕೆ ಹೋಗುತ್ತಿರಲಿಲ್ಲ. ಪ್ರತಿ ದಿನ ಗಲಾಟೆ ಮಾಡ್ತಿದ್ದ. ಜೂ.7 ರಂದು ಪದ್ಮಜಾ ಶಾಪಿಂಗ್ ಹೋಗಿದ್ದ ವಿಷಯ ತಿಳಿದು ಹರೀಶ್ ಗಲಾಟೆ ಮಾಡಿದ್ದ. ಗಲಾಟೆ ಸಂದರ್ಭ ಪತ್ನಿಯ ಕುತ್ತಿಗೆ ಹಿಸುಕಿ ಹಲ್ಲೆ ಮಾಡಿದ ನಂತರ ಆಕೆಯನ್ನು ನೆಲಕ್ಕೆ ಬೀಳಿಸಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿದ್ದಾನೆ.
ನಂತರ ಬೊಮ್ಮನಹಳ್ಳಿ ಪೊಲೀಸರಿಗೆ ಜು.7 ರಂದು ರಾತ್ರಿ ಸಹಜ ಸಾವಾಗಿದೆ ಎಂದು ಕರೆ ಬಂದಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸ್ಥಳೀಯರ ವಿಚಾರಣೆ ಮಾಡಿದಾಗ, ಗಂಡ ಹೆಂಡತಿ ತಡರಾತ್ರಿ ಜಗಳ ಮಾಡುತ್ತಿದ್ದ ವಿಷಯ ತಿಳಿಸಿದ್ದರು. ಆದರೆ ಆಕೆ ಪ್ರಜ್ಞೆ ತಪ್ಪಿ ಸಾವಿಗೀಡಾಗಿದ್ದಾಳೆ ಎಂದು ಗಂಡ ಹರೀಶ್ ಪೊಲೀಸರ ಬಳಿ ಹೇಳಿದ್ದ. ಆದರೆ ಪೊಲೀಸರಿಗೆ ಅನುಮಾನ ಶುರುವಾಗಿತ್ತು.
ಮಗಳು ಇವರಿಬ್ಬರ ಜಗಳವನ್ನು ನೋಡಿದ್ದಳು. ವಿಚಾರಣೆ ಸಂದರ್ಭ ಬಾಲಕಿ ನೀಡಿದ ಸನ್ನೆಯಿಂದ ಅನುಮಾನಗೊಂಡ ಪೊಲೀಸರು ಪತಿ ಹರೀಶ್ನನ್ನು ವಿಚಾರಣೆ ಮಾಡಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಈ ಕುರಿತು ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಹರೀಶ್ನ ಬಂಧನವಾಗಿದ್ದು, ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: Arvinda Limbavali: ‘ಅಂದು’ ಕಾಂಗ್ರೆಸ್ ಸೇರಲು ಯಡಿಯೂರಪ್ಪ ಮುಂದು? ಬಿಜೆಪಿ ನಾಯಕ ಗಂಭೀರ ಆರೋಪ
Comments are closed.