SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮದಲ್ಲಿ ಆಗಲಿದೆ ಮಹತ್ವದ ಬದಲಾವಣೆ

SSLC Exam: ಕರ್ನಾಟಕ ಶಿಕ್ಷಣ ಇಲಾಖೆ ಸಿಬಿಎಸ್‌ಇ ಮಾದರಿಯಲ್ಲಿಯೇ ಎಸ್‌ಎಸ್‌ಎಲ್‌ಸಿ ನಡೆಸಲು ಮುಂದಾಗಿದೆ. ಸರಕಾರಕ್ಕೆ ಸಿಬಿಎಸ್‌ಇ ಮಾದರಿಯನ್ನು ಎಸ್‌ಎಸ್‌ಎಲ್‌ಸಿಯಲ್ಲಿ ಅಳವಡಿಸಲು ಕೆಎಸ್‌ಇಎಬಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸದೆ. ಸರಕಾರ ಇದಕ್ಕೆ ಒಪ್ಪಿಗೆ ಸೂಚಿಸಿದರೆ, ಕರ್ನಾಟಕ ಪಠ್ಯಕ್ರಮ ಅನುಸರಿಸುವ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮಕ್ಕಳು ಸಿಬಿಎಸ್‌ಇ ಮಾದರಿಯ ಪರೀಕ್ಷೆಯನ್ನು ಬರೆಯಬೇಕಾಗಿದೆ.

ಸಿಬಿಎಸ್‌ಇ ಮಾದರಿಯ ಹೊಸ ನಿಯಮ ಬಂದರೆ ಓರ್ವ ವಿದ್ಯಾರ್ಥಿ 20 ಆಂತರಿಕ ಅಂಕ ಪಡೆದರೆ, ಲಿಖಿತ ಪರೀಕ್ಷೆಯಲ್ಲಿ 13 ಒಟ್ಟು 33 ಅಂಕ ಬಂದರೆ ತೇರ್ಗಡೆಯಾಗುತ್ತಾನೆ.
ಈಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಸೇರಿ ಪ್ರಥಮ ಭಾಷೆಯನ್ನು 125 ಕ್ಕೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ದ್ವಿತೀಯ ಹಾಗೂ ತೃತೀಯ ಭಾಷೆಗಳ ಪರೀಕ್ಷೆಯನ್ನು 100 ಅಂಕದಲ್ಲಿ ಮಾಡಲಾಗುತ್ತದೆ. ಪ್ರಥಮ ಭಾಷೆ 25 ಹಾಗೂ ಉಳಿದ ಇತರೆ ವಿಷಯಗಳಲ್ಲಿ ತಲಾ 20 ಅಂಕಗಳು ಆಂಂತರಿಕ ಮೌಲ್ಯಮಾಪಕ್ಕೆ ನಿಗದಿ ಪಡಿಸಲಾಗಿದೆ.
ಈಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮದ ಪ್ರಕಾರ ಉತ್ತೀರ್ಣಗೊಳ್ಳಲು ಶೇ 35 ಅಂಕಗಳನ್ನು ಪಡೆಯಬೇಕು. ಸಿಬಿಎಸ್‌ಇ ಹೊಸ ನಿಯಮ ಜಾರಿಯಾದರೆ ಒಂದು ವಿಷಯದಲ್ಲಿ 20 ಆಂತರಿಕ ಅಂಕ ಪಡೆದು, ಲಿಖಿತ ಪರೀಕ್ಷೆಯ 13 ಅಂಕ ಪಡೆದರೂ ತೇರ್ಗಡೆ ಹೊಂದಬಹುದು.
ಇದರ ಜೊತೆಗೆ ಕನ್ನಡ ಸೇರಿ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷಾ ಪರೀಕ್ಷೆಯ ಅಂಕವನ್ನು 125 ರ ಬದಲಿಗೆ 100ಕ್ಕೆ ಇಳಿಸುವ ಚಿಂತನೆಗಳು ನಡೆದಿದೆ. ಈ ಮೂಲಕ ಒಟ್ಟಾರೆ ಅಂಕಗಳು 625 ಕ್ಕೆ ಇಳಿಸಿ ಚಿಂತನೆ ನಡೆದಿದೆ.
ಇದನ್ನೂ ಓದಿ: Darshan Thoogudeepa: ಹೊಸ ದಿನಾಂಕದಂದು ನಟ ದರ್ಶನ್ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿದ ಕೋರ್ಟ್
Comments are closed.