Rice Truck Strike: ಸರಕಾರದಿಂದ 250 ಕೋಟಿ ರೂ. ಬಾಕಿ: ರಾಜ್ಯವ್ಯಾಪಿ ಅಕ್ಕಿ ಲಾರಿ ಮುಷ್ಕರ

Share the Article

Rice Truck Strike: ಅನ್ನಭಾಗ್ಯ ಆಹಾರಧಾನ್ಯ ಸಾಗಣೆಯ ಲಾರಿ ಮಾಲಕರಿಗೆ ರಾಜ್ಯ ಸರಕಾರ ಇಲ್ಲಿಯವರೆಗೆ ಸುಮಾರು 250 ಕೋಟಿ ರೂ. ನೀಡದೇ ಇರುವುದರಿಂದ, ಈ ಕಾರಣದಿಂದ ಸೋಮವಾರ ಅನ್ನಭಾಗ್ಯ ಆಹಾರ ಧಾನ್ಯ ಸಾಗಾಣಿಕೆ ಲಾರಿಗಳ ಮುಷ್ಕರ ಆರಂಭವಾಗಿದೆ ಎಂದು ವರದಿಯಾಗಿದೆ.

ಸರಕಾರಿ ಬಾಕಿ ಪಾವತಿ ಮಾಡುವವರೆಗೂ ಸುಮಾರು 4500 ಲಾರಿಗಳನ್ನು ರಸ್ತೆಗಿಳಿಸುವುದಿಲ್ಲ ಎನ್ನುವ ಎಚ್ಚರಿಕೆ ಸಂದೇಶವನ್ನು ಲಾರಿ ಮಾಲಕರು ರವಾನೆ ಮಾಡಿದ್ದಾರೆ.

ಐದಾರು ತಿಂಗಳಿನಿಂದ ಸರಕಾರ ಸಾಗಣೆ ವೆಚ್ಚ ನೀಡಿಲ್ಲ. ಆಹಾರ ಇಲಾಖೆಯಿಂದ 250ಕೋಟಿ ರೂ. ಬಾಕಿ ಬರಬೇಕಿದೆ. ರಾಜ್ಯಕ್ಕೆ ಪ್ರತೀ ತಿಂಗಳು 4.50 ಲಕ್ಷ ಟನ್‌ ಆಹಾರ ಧಾನ್ಯಗಳನ್ನು ಲಾರಿಗಳ ಮೂಲಕ ಸಾಗಿಸಲಾಗುತ್ತದೆ ಎಂದು ರಾಜ್ಯ ಲಾರಿ ಮಾಲಕರು ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಮತ್ತು ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಜೂ.25 ರೊಳಗೆ ಬಾಕಿ ನೀಡುವ ಭರವಸನ್ನು ಸರಕಾರ ನೀಡಿತ್ತು. ಆದರೆ ಇಲ್ಲಿಯವರೆಗೂ ಹಣ ಬಿಡುಗಡೆ ಮಾಡಿಲ್ಲ. ಈ ಕಾರಣದಿಂದ ಅನಿವಾರ್ಯವಾಗಿ ಮುಷ್ಕರಕ್ಕೆ ಕರೆ ನೀಡಲಾಗಿದೆ.

Comments are closed.